ಸ್ಥಳೀಯ ಸುದ್ದಿಗಳು

ಉದ್ಯಮಿ ಹಬೀಬ್ ಮನೆಯ ಸೆಕ್ಯೂರಿಟಿ ಗಾರ್ಡ್ ದಿಡೀರ್ ಎಂದು ಕುಸಿದು ಬಿದ್ದು ಸಾವು!

2022-07-05 10-54-11

ಸುದ್ದಿಲೈವ್. ಕಾಂ/ಶಿವಮೊಗ್ಗ

ಉದ್ಯಮಿಯೊಬ್ಬರ ಮನೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ದಿಡೀರೆಂದು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಾಲುಕ್ಯ ನಗರದಲ್ಲಿ ನಡೆದಿದೆ.

ಉದ್ಯಮಿ ಹಬೀಬ್ ಮನೆಯ ಸೆಕ್ಯೂರಿಟಿ ಗುರುವಯ್ಯ (64) ಎಂಬುವರು ದಿಡೀರೆಂದು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ 6-30 ರ ವೇಳೆಯಲ್ಲಿ ಮನೆಯ ಮಾಲೀಕರ ಸದಸ್ಯರೊಂದಿಗೆ ಮಾತನಾಡಿದ್ದ ಗುರುವಯ್ಯ 7 ಗಂಟೆಯ ಹೊತ್ತಿಗೆ ಕುರ್ಚಿಯಲ್ಲಿಯೇ ಕುಸಿದು ಬಿದ್ದಿದ್ದಾರೆ.‌

ಕಾಚಿನಕಟ್ಟೆ ನಿವಾಸಿಯಾಗಿರುವ ಗುರುವಯ್ಯರನ್ನ ಮೆಗ್ಗಾನ್ ಗೆ ಸಾಗಿಸಲಾಗಿದ್ದರೂ ಸಹ ಅವರನ್ನ ಉಳಿಸಿಕೊಳ್ಳಲಾಗಲಿಲ್ಲವೆಂಬುದು ಪೊಲೀಸ್ ಠಾಣೆಯ ಮಾಹಿತಿ ಆಗಿದೆ.

ಮಾನವೀಯತೆ ಮರೆತರಾ ಉದ್ಯಮಿ ಹಬೀಬ್?

ಆದರೆ ಸ್ಥಳೀಯರ ಪ್ರಕಾರ ಉದ್ಯಮಿ ಹಬೀಬ್ ಅಥವಾ ಅವರ ಕುಟುಂಬಸ್ಥರು ಕುಸಿದು ಬಿದ್ದ ಗುರುವಯ್ಯರನ್ನ ತಕ್ಷಣವೇ ಮೆಗ್ಗಾನ್ ಗೆ ಸಾಗಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಮೃತರ ಕುಟುಂಬಸ್ಥರು ಕಾಚಿನಕಟ್ಟೆಯಿಂದ ಸ್ಥಳಕ್ಕೆ ಬರುವ ತನಕ ಹಾಗೆ ಬಿಟ್ಟಿದ್ದಾರೆ ಎಂಬುದು ಅರೊಪಿಸಿದ್ದಾರೆ. ಹಬೀಬ್ ಆಗಲಿ ಅಥವಾ ಕುಟುಂಬಸ್ಥರು ಮಾನವೀಯತೆ ಮರೆತಿದ್ದಾರೆ ಎಂಬುದು ಸ್ಥಳೀಯರ ದೂರಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button