ರಾಜ್ಯ

ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳಿಗೆ ರಾಜಾತಿಥ್ಯ-ಕೆಂಡಕಾರಿದ ಮುತಾಲಿಕ್

ಸುದ್ದಿಲೈವ್. ಕಾಂ/ಶಿವಮೊಗ್ಗ

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಹಿಂದೂ ಹರ್ಷ ಕೊಲೆ ಕೇಸ್​ನ ಆರೋಪಿಗಳಿಗೆ ಜೈಲಿನಲ್ಲಿಯೇ ಮೊಬೈಲ್​ ಬಳಕೆಗೆ ಅವಕಾಶಕೊಟ್ಟಿರೋದನ್ನು ಶ್ರೀರಾಮ ಸೇನೆಯ ಪ್ರಮೋದ್​ ಮುತಾಲಿಕ್​ ಖಂಡಿಸಿದ್ದಾರೆ.

ಈ ಸಂಬಂಧ ವಿಡಿಯೋ ಹೇಳಿಕೆ ನೀಡಿರುವ ಅವರು, ಯುವಕನೊಬ್ಬನನ್ನು ಕೊಂದ ಅರೊಪಿಗಳಿಗೆ ಇಂತಹ ಸವಲತ್ತುಗಳನ್ನು ನೀಡಿರುವುದು ನೀಚತನ ಎಂದಿದ್ದಾರೆ.

ಅಧಿಕಾರಿಗಳ ಮಕ್ಕಳಿಗೆ ಅಂತಹ ಸ್ಥಿತಿ ತಂದಿದ್ದರೆ, ಅಂತವರಿಗೂ ಅದೇ ಸವಲತ್ತು ನೀಡುತ್ತಿದ್ದರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇವತ್ತು ಹರ್ಷ ಕುಟುಂಬಸ್ಥರು ಯಾರ ಜೊತೆಗೆ ಮಾತನಾಡಬೇಕು. ಅಂತದ್ದೊಂದು ದುರಂತ ಸ್ಥಿತಿಯನ್ನು ತಂದಿರುವ ಆರೋಪಿಗಳಿಗೆ ಸವಲತ್ತು ನೀಡುತ್ತಿರೋದು ಯಾರು!? ಇದೇನಾ ಬಿಜೆಪಿಯ ಶಿಕ್ಷೆ ಕೊಡಿಸುವ ಜವಾಬ್ದಾರಿ ಎಂದು ಬಿಜೆಪಿ ನಡೆಯನ್ನು ಖಂಡಿಸಿದ್ದಾರೆ.

ಇನ್ನೂ ಈ ಬಗ್ಗೆ ಹರ್ಷನ ಕುಟುಂಬಸ್ಥರು ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರಿ ವ್ಯವಸ್ಥೆಯ ಬಗ್ಗೆಯೇ ಬೇಸರವಾಗುತ್ತಿದೆ. ಇಲ್ಲಿ ನಾವು ದುಃಖದಲ್ಲಿ ನೋವು ಅನುಭವಿಸುತ್ತಿದ್ದೇವೆ. ಆದರೆ, ಅವರುಗಳು ಜೈಲಿನಲ್ಲಿ ಅವರ ಪತ್ನಿ, ಮಕ್ಕಳ ಜೊತೆಗೆ ಮಾತನಾಡಿಕೊಂಡು ಆರಾಮಾಗಿದ್ದಾರೆ. ನಮ್ಮವರನ್ನು ಕಳೆದುಕೊಂಡು ನಾವು ನೋವು ಅನುಭವಿಸುತ್ತಿದ್ದೇವೆ ಎಂದು ಮಾಧ್ಯಮವೊಂದರ ಬಳಿ ಅಳಲು ತೋಡಿಕೊಂಡಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button