ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜನಪರ ಹೋರಾಟ ವೇದಿಕೆಯ ಖಡಕ್ ಎಚ್ಚರಿಕೆ!

ಸುದ್ದಿಲೈವ್. ಕಾಂ/ಸಾಗರ:
ತಾಲ್ಲೂಕಿನ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಸ್ಟ್ 10ರ ಒಳಗೆ ಖಾಲಿ ಇರುವ ವೈದ್ಯರು ನರ್ಸ್ ಸೇರಿದಂತೆ ಸಿ ಸಿ ಟಿವಿ ಮತ್ತು ಜನರೇಟರ್ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಸರಿಪಡಿಸದೇ ಇದ್ದರೆ ಅಗಸ್ಟ್ 15 ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸುವುದಾಗಿ ತುಮರಿಯ ಜನಪರ ಹೋರಾಟ ವೇದಿಕೆ ತಿಳಿಸಿದೆ
ತುಮರಿ ಆಸ್ಪತ್ರೆಯ ಮೂಲಭೂತ ಸೌಕರ್ಯ ಮತ್ತು ಖಾಲಿ ಇರುವ ಸಿಬ್ಬಂದಿಯನ್ನು ತುಂಬಲು ಈ ಹಿಂದಿನ 108 ಹೋರಾಟದ ಸಂಧರ್ಭದಲ್ಲಿ ಮಾರ್ಚ್ ತಿಂಗಳ ಮುಕ್ತಾಯಕ್ಕೆ ಪೂರ್ಣ ಮಾಡುವ ಭರವಸೆಯನ್ನು ಇಲಾಖೆ ನೀಡಿತ್ತು ಆದರೆ ಈ ವರೆಗೆ ಅದನ್ನು ಪೂರ್ಣ ಗೊಳಿಸದೆ ಹಿನ್ನಲೆಯಲ್ಲಿ ಎರಡನೇ ಅವಧಿಯ ಗಡುವನ್ನು ವಿಸ್ತರಿಸುವುದಾಗಿ ವೇದಿಕೆ ಅಧ್ಯಕ್ಷ ಜಿ ಟಿ ಸತ್ಯನಾರಾಯಣ ತಿಳಿಸಿದ್ದಾರೆ
ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರವು 24×7 ಅವಧಿಯ ಪೂರ್ಣಾವಧಿ ಸೇವೆಯನ್ನು ನೀಡಬೇಕಾಗಿದ್ದು ವೈದ್ಯರು ಮತ್ತು ಸಿಬ್ಬಂದಿಯ ಕೊರತೆಯಿಂದ ರಾತ್ರಿ ವೇಳೇಯಲ್ಲಿ ಸೇವೆಯನ್ನು ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈಚೆಗೆ ನಾಗರೀಕರ ಅಸಹನೆ ಹೆಚ್ಚಾಗಿದ್ದು ವೇದಿಕೆ ಸಾರ್ವಜನಿಕರ ಧ್ವನಿಯಾಗಿ ಸತ್ಯಾಗ್ರಹ ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ.
ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದೇ ಇರುವ ಕಾರಣ ಮೇಣದ ಬತ್ತಿ ಬೆಳಕಿನಲ್ಲಿ ಸೇವೆ ನೀಡಬೇಕಾಗಿದೆ. ಸಿ ಸಿ ಕ್ಯಾಮರಾ ಜನರೇಟರ್ ವ್ಯವಸ್ಥೆ ಮತ್ತು ಕಟ್ಟಡದ ದುರಸ್ತಿ ಕಾರ್ಯ ಬಾಕೀ ಇದ್ದು ಇಲಾಖೆ ಈ ಹಿಂದಿನ ಪ್ರತಿಭಟನೆ ವೇಳೆಯಲ್ಲಿ ಲಿಖಿತ ರೂಪದಲ್ಲಿ ನೀಡಿದ ಭರವಸೆಯನ್ನು ಈ ವರೆಗು ಈಡೇರಿಸಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಅತಿ ತುರ್ತು ಇರುವ ಸ್ಟಾಪ್ ನರ್ಸ್ ಹುದ್ದೆ ತುಂಬಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನ ವಿನಂತಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.
108 ಜಂಟಿವಾಹನ ಲಭ್ಯವಾಗಿದ್ದರು ಶೆಡ್ ನಿರ್ಮಾಣ ಪ್ರಕ್ರಿಯೆ ಆರಂಭವಾಗದೇ ಇರುವುದು ನಾಗರೀಕರ ಬೇಸರಕೇ ಕಾರಣ ವಾಗಿದೆ ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯ ದಿನದಂದೆಯೇ ಸಂಘ ಸಂಸ್ಥೆಗಳ ಸಹಕಾರ ಪಡೆದು ಸತ್ಯಾಗ್ರಹ ನಡೆಸುವುದಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

