ಕ್ರೈಂ

ತೀರ್ಥಹಳ್ಳಿ-ಎಬಿವಿಪಿ ತಾಲೂಕು ಅಧ್ಯಕ್ಷನ ಮೇಲೆ ಹಲ್ಲೆ-ಯುವಕನನ್ನ ಬಜಾವ್ ಮಾಡಲು ಲಘು ಲಾಠಿ ಪ್ರಹಾರ

20220704_201013

ಸುದ್ದಿಲೈವ್. ಕಾಂ/ತೀರ್ಥಹಳ್ಳಿ

ಎಬಿವಿಪಿ ತಾಲೂಕು ಅಧ್ಯಕ್ಷ ಮತ್ತು ಆತನ ಸ್ನೇಹಿತನ ಮೇಲೆ 15 ಜನ ಯುವಕರು ಹಲ್ಲೆ ನಡೆಸಿದ್ದು ಗಲಾಟೆಯನ್ನ ಬಿಡಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ತೀರ್ಥಹಳ್ಳಿಯ ಜಿಪಿಎಸ್ ಸಿ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ ಹಾಗೂ ಎಬಿವಿಪಿ ಸಂಘಟನೆಯ ತಾಲೂಕು ಅಧ್ಯಕ್ಷ ಪ್ರತೀಕ್ ಗೌಡ ಮಳೆ ಅಧಿಕವಾಗಿರುವುದರಿಂದ ಮನೆಗೆ ತೆರಳಲು ಸ್ನೇಹಿತನಿಗೆ ಕಾರು ತರಲು ಹೇಳಿರುತ್ತಾನೆ. ಅದೇ ಸಮಯಕ್ಕೆ ನಿಶಾಂತ್ ತಮ್ಮ ಟಾಟಾ ಇಂಡಿಕಾ ಕಾರನ್ನ ತಂದಿದ್ದಾನೆ.

ಪ್ರತೀಕ್ ಗೌಡ ಕಾರಿನಲ್ಲಿ ಕುಳಿತುಕೊಂಡು ಕಾಲೇಜಿನ ಕಾಂಪೌಂಡ್ ನಿಂದ  ಹೋಗುತ್ತಿದ್ದಂತೆ ಕಾಲೇಜಿನ ಹೊರಭಾಗದಲ್ಲಿದ್ದ ಅದೇ ಕಾಲೇಜಿನ ಮತ್ತು ಇತರೆ ಇಬ್ಬರು ಯುವಕರು ಕಾರನ್ನ ತಡೆದು ಕಾರಿನ ಡೋರನ್ನ ಒಡೆದು ಕಾರಿನಲ್ಲಿರುವ ಇಬ್ವರು ಯುವಕರನ್ನ ಹೊರಗೆ ಎಳೆಯಲು ಯತ್ನಿಸಿದ್ದಾರೆ.

ಅಬ್ದುಲ್ ವಾಜಿದ್, ನಿಹಾರ್, ನಿಹಾನ್ ,ಹ್ಯಾರಿಸ್, ಸದಾಪ್ ಸಾವಿದ್ ರಿಜ್ವಾನ್, ಜೇಶನ್,ಮಾಸೂಮ್ ಬ್ಯಾರಿ ಇನ್ನಿತರೆ ಹೊರಗಿನ ಯುವಕರು ಇಬ್ವರು ಯುವಕರನ್ನ ಕಾರಿನಿಂದ ಹೊರಗೆ ಎಳೆದು ತಳಿಸಿ ನೆಲಕ್ಕೆ ಉರುಳಿಸಿ ಥಳಿಸಿದ್ದಾರೆ. ಕೈಕಾಲುಗಳಿಗೆ ಕಲ್ಲುಗಳಿಂದ ಥಳಿಸಿದ್ದಾರೆ. ನಮ್ಮ ತಂಟೆಗೆ ಬಂದರೆ ನಿಮ್ಮನ್ನ ಜೀವಂತವಾಗಿ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ.

ಈ ವೇಳೆ ಪೊಲೀಸರು ಸ್ಥಳಕ್ಕೆ ಬಂದಿದ್ದು ಜಗಳ ಬಿಡಿಸಲು ಯತ್ನಿಸಿದರು ಇಬ್ವರು ಯುವಕರನ್ನ 15 ಜನರ ಗ್ಯಾಂಗ್ ಬಿಡಲು ಸಿದ್ದವಿರಲಿಲ್ಲ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಲಾಠಿ ಪ್ರಹಾರ ಮಾಡುತ್ತಿದ್ದಂತೆ ಹಲ್ಲೆ ನಡೆಸಿದ ಗ್ಯಾಂಗ್ ಕಾಲು ಕಿತ್ತಿದೆ.

ಈ ಘಟನೆ ಹಳೇಯ ದ್ವೇಷದಿಂದ ನಡೆದಿದೆ ಎಂದು ಆರೋಪಿಸಿ ಪ್ರತೀಕ್ ಗೌಡ ಅಬ್ದುಲ್ ವಾಜಿದ್, ನಿಹಾರ್, ನಿಹಾನ್ ,ಹ್ಯಾರಿಸ್, ಸದಾಪ್ ಸಾವಿದ್ ರಿಜ್ವಾನ್, ಜೇಶನ್,ಮಾಸೂಮ್ ಬ್ಯಾರಿ ಇನ್ನಿತರೆ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆದರೆ ಸ್ಥಳೀಯರ ಪ್ರಕಾರ ಹಳೆಯ ದ್ವೇಷ ಹಿಜಾಬ್ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ತನಿಖೆಯಿಂದ ಸತ್ಯ ಹೊರಬರಬೇಕಿದೆ. ಗೃಹ ಸಚಿವರ ಕ್ಷೇತ್ರದಲ್ಲಿ ಅದೂ‌ ಬಿಜೆಪಿಯ ಅಂಗ ಸಂಘಟನೆಯ ಅಧ್ಯಕ್ಷನ ವಿರುದ್ಧ ದಾಳಿ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button