ಸುದ್ದಿ
ಕರುನಾಡ ಹಿತ ರಕ್ಷಣಾ ವೇದಿಕೆ ಯಿಂದ ನೇರಪಾವತಿ ಪೌರ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ

ಸುದ್ದಿಲೈವ್.ಕಾಂ/ಕಾರ್ಗಲ್
ಕಾರ್ಗಲ್: ಕರುನಾಡ ಹಿತ ರಕ್ಷಣಾ ವೇದಿಕೆಯಿಂದ ಕಾರ್ಗಲ್ ಪಟ್ಟಣ ಪಂಚಾಯತಿಯ ನೇರ ಪಾವತಿ ಪೌರ ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದೆ.
ಕರುನಾಡ ಹಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ರವರು ಇಂದು ಕಾರ್ಗಲ್ ಪಟ್ಟಣ ಪಂಚಾಯತಿ ಆವರಣದಲ್ಲಿ ನಡೆಸುತ್ತಿದ್ದ ಪ್ರತಿಭಟನ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಲಾಯಿತು. ಅಂತಯೇ ಅವರೂಂದಿಗೆ ಕುಳಿತು ಪ್ರತಿಭಟನೆಯನ್ನು ನಡೆಸಲಾಯಿತು.
ಸರ್ಕಾರ ಪೌರ ಕಾರ್ಮಿಕರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.

