ಕ್ರೈಂ

ಹರ್ಷನ ರಕ್ತಸಿಕ್ತ ಫೊಟೊದ ಜೊತೆ ತಮ್ಮಗಳ ಫೊಟೊ ಅಪ್ಲೋಡ್-ನಾಲ್ವರು ವಿರುದ್ಧ ಸುಮೋಟೋ ಪ್ರಕರಣ

ಸುದ್ದಿಲೈವ್.ಕಾಂ/ಶಿವಮೊಗ್ಗ

ಜನರಲ್ಲಿ ಭಯ‌ಹುಟ್ಟಿಸುವ ಸಲುವಾಗಿ ಹರ್ಷನ ಕೊಲೆಯಲ್ಲಿ ಭಾಗಿಯಾಗಿರುವ ರೀತಿಯಲ್ಲಿ ಇನ್ ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ರಕ್ತ ಸಿಕ್ತನಾಗಿ ಬಿದ್ದ ಹರ್ಷನ ಫೊಟೊ ಜೊತೆಗೆ ನಾಲ್ವರು ತಮ್ಮ ಫೊಟೊ ಅಪಲೋಡ್ ಮಾಡಿಕೊಂಡು ಕೋಮು ಸೌಹಾರ್ಧತೆಗೆ ಧಕ್ಕೆ ಉಂಟು ಮಾಡಿದ ನಾಲ್ವರು ಅಪ್ರಾಪ್ತ ಬಾಲಕರ ವಿರುದ್ಧಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಸುಮೋಟೊ ಪ್ರಕರಣ‌ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರ್ಷನ ರಕ್ತಸಿಕ್ತನಾಗಿ ಬಿದ್ದಿದ್ದ ಫೊಟೊಗಳ ಜೊತೆ ತಾವೂ ಭಾಗಿಯಾಗಿರುವಂತೆ ಬಿಂಬಿಸಿ ಜನರಲ್ಲಿ ಭಯ ಹುಟ್ಟಿಸುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಫೊಟೊ ಅಪಲೋಡ್ ಮಾಡಿರುವ ನಾಲ್ವರು ೧೬ ವರ್ಷದ ಬಾಲಕರಾಗಿದ್ದಾರೆ. ಇದರಲ್ಲಿ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ.

ಮೊನ್ನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಸಂಜೀವ್ ಕುಮಾರ್ ಗಸ್ತಿನಲ್ಲಿದ್ದಾಗ‌ ರಾಗಿಗುಡ್ಡದ ನೆಕ್ಸಾ ಶೋ ರೂಮ್ ಬಳಿ ಇದ್ದಾಗ 02 ಜನ ಹುಡುಗರು ಸಮವಸ್ತ್ರದಲಿದ್ದ ಪೊಲೀಸ್ ಇನ್ ಸ್ಪೆಕ್ಟರ್ ನ್ನ ನೋಡಿ ಅನುಮಾನ ಬರುವ ರೀತಿಯಲ್ಲಿ ವರ್ತಿಸುತ್ತಿದ್ದರು.

ಅವರ ಹತ್ತಿರ ಹೋದಾಗ 02 ಜನ ಹುಡುಗರು ಪಿರ್ಯಾದಿಯನ್ನು ನೋಡಿ ಓಡಲು ಪ್ರಯತ್ನಿಸಿದ್ದರು. 02 ಜನ ಹುಡುಗರನ್ನು ಠಾಣಾ ಸಿಬ್ಬಂದಿಯವರು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಸಮಂಜಸವಾಗಿ ಉತ್ತರ ನೀಡದೇ ತಮ್ಮಗಳ ಹೆಸರು ವಿಳಾಸಗಳನ್ನು ಮರೆ ಮಾಚಲು ಪ್ರಯತ್ನಿಸಿದ್ದರು.

ಇಬ್ಬರಲ್ಲಿ ಒಬ್ಬ ಹುಡುಗನ ಬಳಿಯಲಿದ್ದ ಮೊಬೈಲ್ ಪೋನನ್ನು ಪರಿಶೀಲಿಸಲಾಗಿ ಸದರಿ ಮೊಬೈಲ್ ನ ಇನ್ ಸಾಗ್ರಾಂ ಅಪ್ಲಿಕೇಶನ್ ನಲ್ಲಿ ಶಿವಮೊಗ ನಗರದಲ್ಲಿ ಇತ್ತೀಚೆಗೆ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ ಈತನು ರಕ್ತಸಿಕ್ತವಾಗಿ ಬಿದ್ದಿರುವ ಪೋಟೊವನ್ನು ಮತ್ತು ಅದರ ನಂತರದಲ್ಲಿ ಒಟ್ಟು 04 ಜನ ಹುಡುಗರ ಫೋಟೊಗಳನ್ನು ಸ್ಫೋಟಿಸ್ ಗೆ ಅಪ್ ಲೋಡ್ ಮಾಡಿ ಅದಕ್ಕೆ ಯಾವುದೋ ಕನ್ನಡ ಚಲನಚಿತ್ರದ ಡೈಲಾಗನ್ನು ಹಾಕಿಕೊಂಡಿದ್ದರು.

ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ, ಸಾರ್ವಜನಿಕರು ನೋಡುವಂತೆ ಸ್ಟೇಟಸ್ ಹಾಕಿಕೊಂಡಿದ್ದರು. ಈ ಹುಡುಗರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾ ನಾಲ್ವರು ಅಪ್ರಾಪ್ತ ಬಾಲಕರಾಗಿದ್ದು ಸ್ಟೇಸ್ ನಲ್ಲಿದ್ದ ಇನ್ನಿಬ್ಬರು ಸಹ ಅಪ್ರಾಪ್ತ ಬಾಲಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಟೇಟಸ್ ಹಾಕಿದ ಬಗ್ಗೆ ವಿಚಾರ ಮಾಡಲಾಗಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆಯಾಗಿ ನಗರದಲ್ಲಿ ಗಲಾಟೆ ಗಲಭೆಗಳಾಗಿದ್ದು, ನಾವು ಸಹ ಕೊಲೆಯಲ್ಲಿ ಭಾಗಿಯಾಗಿರುವಂತೆ ಸ್ಟೇಟಸ್‌ ಹಾಕಿದರೆ ಅದನ್ನು ಜನರು ನೋಡಿ ನಮ್ಮಗಳನ್ನು ನೋಡಿದರೆ ಹೆದರುತ್ತಾರೆ ನಾವು ಫೇಮಸ್ ಆಗಬಹುದು ಎಂದು ತಿಳಿದುಕೊಂಡು ಸ್ಟೇಟಸ್ ಹಾಕಿರುವುದಾಗಿ ತಿಳಿಸಿದ್ದಾರೆ.

ಹುಡುಗರು ಸಮಾಜದಲ್ಲಿ ವಿವಿಧ ಕೋಮುಗಳ ನಡುವೆ ಕೋಮು ಸಂಘರ್ಷಕ್ಕೆ ಒಳಗಾಗುವಂತೆ ಹಾಗೂ ಪರಸ್ಪರ ಅಸೌಹಾರ್ದವನ್ನು ವೈ ಮನಸ್ಸನ್ನು ಉಂಟು ಮಾಡುವಂತಹ ಸ್ಫೋಟಿಸನ್ನು ಸಾಮಾಜಿಕ ಜಾಲತಾಣದಲ್ಲಿ, ಹಾಕಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಲು ಪ್ರಯತ್ನಿಸಿರುವುದು ಕಂಡು ಬಂದಿದ್ದರಿಂದ ಮುಂದಿನ ಕ್ರಮದ ಸಲುವಾಗಿ 02 ಜನ ಹುಡುಗರನ್ನ ವಶಕ್ಕೆ ಪಡೆಯಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button