ಕಡ್ಡಿ ಸುನೀಲ,ಸಮಂತನಾಯ್ಕ್,ಬೆಕ್ಕು ರವಿ ಮತ್ತು ಪ್ರೀತು ವಿರುದ್ದ ಬಿತ್ತು ಎಫ್ಐಆರ್!

ಸುದ್ದಿಲೈವ್.ಕಾಂ/ಶಿವಮೊಗ್ಗ
ಪೈಂಟಿಂಗ್ ಕೆಲಸ ಮಾಡಿಕೊಂಡಿರುವ ರವಿ ಮತ್ತು ಆತನ ಪತ್ನಿಯನ್ನ ಅವಮಾನಿಸಿ ಜೀವ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆಶ್ರಯ ಬಡಾವಣೆಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ರವಿ ಮತ್ತು ಆತನ ಪತ್ನಿಯ ಮೇಲೆ ಹಲ್ಲೆ ನಡೆಸಿದ ಕಡ್ಡಿ ಸುನೀಲ,ಸಮಂತಾ, ಬೆಕ್ಕು ರವಿ, ಪ್ರೀತು ಎಂಬುವರು ಹಲ್ಲೆ ನಡೆಸಿ ರವಿ ಪತ್ನಿಯನ್ನ ಎಳೆದಾಡಿ ಜೀವ ಬೆದರಿಕೆ ಹಾಕಿರುವುದಾಗಿ ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ರವಿ ಬಿದ್ದು ಗಾಯ ಮಾಡಿಕೊಂಡಿದ್ದ
ಜು.26 ರಂದು ಮದ್ಯಾಹ್ನ 02.00 ಗಂಟೆಗೆ ಊಟಕ್ಕೆ ಹೋಗಲು ಉಷಾ ನರ್ಸಿಂಗ್ ಹೋಮ್ ಹತ್ತಿರ ಪೈಂಟರ್ ರವಿ ಬೈಕ್ ಗೆ ನಾಯಿ ಅಡ್ಡ ಬಂದಿದೆ. ನಾಯಿಯನ್ನ ತಪ್ಪಿಸಲು ಹೋಗಿ ರವಿ ಬಿದ್ದು ಗಾಯ ಮಾಡಿಕೊಂಡಿರುತ್ತಾನೆ.
ಮನೆಯಲ್ಲೇ ಇದ್ದ ರವಿ ವಿಶ್ರಾಂತಿ ಪಡೆಯುತ್ತಿದ್ದನು. ಮೊನ್ನೆ ರಾತ್ರಿ ರವಿಯ ಗಾಯಕ್ಕೆ ಔಷಧಿ ಹಚ್ಚುತ್ತಿದ್ದಾಗ ಪಕ್ಕದ ಮನೆ ಖಾಲಿ ಇದ್ದು, ನಾಯಿ ಬೊಗಳಲು ಆರಂಭಿಸಿದೆ. ಖಾಲಿ ಮನೆಯಲ್ಲಿ ನಾಯಿ ಬೊಗಳುವ ಶಬ್ದ ಕೇಳಿ ರವಿಯ ಪತ್ನಿ ನಾಯಿಯನ್ನು ಓಡಿಸಲು ಹೋಗಿದ್ದಾಗ, ಸ್ವಲ್ಪ ಸಮಯದ ನಂತರ ಅಕೆಯು ಕಿರುಚಿಕೊಂಡಿದ್ದಾಳೆ.
ಪತ್ನಿಯನ್ನ ಎಳೆಯುತ್ತಿದ್ದ ಕಿರಾತಕರು
ಪತ್ನಿ ಶಬ್ದ ಕೇಳಿದ ರವಿ ಮತ್ತು ಆತನ ಮಗಳು ಎರಡು ಮನೆಯಿಂದ ಹೊರಬಂದು ನೋಡುವಾಗ ಸ್ಥಳದಲ್ಲಿ ಸಮಂತನಾಯ್ಕ್, ಕಡ್ಡಿ ಸುನೀಲ, ಬೆಕ್ಕು ರವಿ, ಪ್ರೀತುರವರುಗಳು ಇದ್ದು, ಕಡಿ, ಸುನೀಲನು ರವಿಯ ಪತ್ನಿಯನ್ನ ಹಿಡಿದು ಎಳೆಯುತ್ತಿದ್ದನು.
ಪತ್ನಿಯನ್ನ ಬಿಡಿಸಲು ಹೋದಾಗ ಸಮಂತನಾಯ್ಕ, ಬೆಕ್ಕು, ರವಿ, ಪ್ರೀತು ಮತ್ತು ಕಡ್ಡಿ ಸನೀಲರವರು ರವಿಗೆ ಆಗಿದ್ದ ಗಾಯದ ಮೇಲೆ, ಮುಖಕ್ಕೆ, ಮೈಕೈಗೆ ಹೊಡೆದು ಹಲ್ಲೆ ನಡೆಸುತ್ತಾರೆ. ಗಂಡ ಹೆಂಡತಿಯ ಮೇಲೆ ಅವ್ಯಾಚ್ಯ ಶಬ್ದದಿಙದ ಬೈದ ನಾಲ್ವರು ಚಾಕು ತೋರಿಸಿ ನಮ್ಮ ತಂಡೆಗೆ ಬಂದರೆ ಚುಚ್ಚಿಬಿಡುವುದಾಗಿ ಬೆದರಿಸುತ್ತಾರೆ.
ರಕ್ಷಣೆಗೆ ಬಂದಿದ್ದು ರವಿಯ ತಾಯಿ ಮತ್ತು ತಮ್ಮ
ರವಿಯ ಪತ್ನಿ ರವಿ ತಾಯಿಗೆ ಪೋನ್ ಮಾಡಿ ತಿಳಿಸಿದ್ದು ತಕ್ಷಣ ರವಿಯ ತಮ್ಮ ಶಿವು ಮತ್ತು ತಾಯಿ ಬಂದು ಜಗಳ ಬಿಡಿಸಿರುತ್ತಾರೆ. ನಮ್ಮ ತಂಟೆ ತಕರಾರಿಗೆ ಬಂದರೆ ಚಾಕುವಿನಿಂದ ಚುಚ್ಚುತ್ತೇನೆಂದು ಜೀವ ಬೆದರಿಕೆ ಹಾಕಿ ಆಟೋ ದಲಿ ಹೋಗಿರುತ್ತಾರೆ.
ರವಿ ಮತ್ತು ಆತನ ಪತ್ನಿಯನ್ನ ಎಳೆದಾಡಿ ಅವಮಾನಿಸಿ ಜೀವ ಬೆದರಿಕೆ ಹಾಕಿದ ಕಡ್ಡಿ ಸುನೀಲ, ಸಮಂತನಾಯ್ಕ್, ಬೆಕ್ಕು ರವಿ, ಪ್ರೀತು ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನೋಬನಗರದಲ್ಲಿ ದೈರು ದಾಖಲಿಸಿದ್ದಾರೆ.

