ಕುಡಿಯುವ ನೀರಿನ ಪೈಪ್ ಲೈನ್ ಕಿತ್ತು ಹಾಕಿದ ಭೂಪ!

ಸುದ್ದಿಲೈವ್.ಕಾಂ/ಶಿವಮೊಗ್ಗ
ಲೇಔಟ್ ಜಾಗಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿ ಅಳವಡಿಸಿರುವ ಸಾರ್ವಜನಿಕರ ಕುಡಿಯುವ ನೀರಿನ ಪೈಪ್ ನ್ನ ಕಿತ್ತು ಹಾಕಿದ ವ್ಯಕ್ತಿಯ ವಿರುದ್ಧ ಪಿಡಿಒ ಶಶಿಕಲಾ ಕುಂಸಿಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಕೋಹಳ್ಳಿ ಗ್ರಾಮ ಸಾಗಿನ ಕಟ್ಟೆ, ಕೆರೆ ಏರಿಯಿಂದ ರಂಗನಾಥ ಬಡವಣೆಗೆ ಹೋಗುವ ರಸ್ತೆಯು ಬಿಪಿನ್ ಚಂದ್ರ ಹಾಗೂ ಮಂಜುನಾಥ ಬಿನ್ ನಾಗಪ್ಪ, ಕವಿತಾ ಕೋಂ ಬಸವರಾಜ ಎಂಬುವವರಿಗೆ ಸೇರಿರುತ್ತದೆ.
ಸರ್ವೇ ನಂಬರ್ 78 ರ ಮಾಲಿಕರು ಬಿಪಿನ್ ಚಂದ್ರ, ಮಂಜುನಾಥ್,ಕವಿತಾ ಕೋಂ ಬಸವರಾಜ್ ಗೆ ಸೇರಿರುತ್ತದೆ. ಈ ಜಮೀನಿನ ಮಧ್ಯ ಭಾಗದಲ್ಲಿ ಸಾಗಿನ ಕಟ್ಟೆ ಮತ್ತು ರಂಗನಾಥ ಬಡಾವಣೆ ನಡುವೆ ರಸ್ತೆ ಹಾದು ಹೋಗುತ್ತದೆ.
ಈ ಜಾಗದ ಪಕ್ಕದಲ್ಲಿ ಪುಷ್ಪಲತಾ ಕೋಂ ಜಗದೀಶ್, ಸರ್ವೇ ನಂಬರ್ 38ರ 1.4 ಗುಂಟೆ ಜಾಗವನ್ನು ತುಂಡು ಭೂಮಿಯಾಗಿ ಖರೀದಿ ಮಾಡಿದ್ದು ರಂಗನಾಥ ಬಡವಣೆಯ ಸಂಪರ್ಕ ರಸ್ತೆಯ ಪುಷ್ಪಲತ ಕೋಂ ಜಗದೀಶ್ ಇವರ ಜಾಗದ ಪಕ್ಕದಲ್ಲಿ ಅನ್ನಪೂರ್ಣ ಲೇ ಚೌಟ್ ಮಾಲಿಕರು ಸಾರ್ವಜನಿಕ ನಿರ್ಮಾಣ ಮಾಡಿದ್ದು, ಈ ರಸ್ತೆ ಪಕ್ಕದಲ್ಲಿ ಗ್ರಾಮ ಪಂಚಾಯಿತಿ ಕುಡಿಯುವ ನೀರಿನ ಸಂಪರ್ಕದ ಪೈಪ್ ಲೈನ್ ಹಾದು ಹೋಗಿದೆ.
ಈ ಪೈಪ್ ಲೈನ್ ಗಳನ್ನ ಜಗದೀಶ್ ಕಿತ್ತುಹಾಕಿದ್ದು, ಸಾರ್ವಜನಿಕ ರಸ್ತೆಗೆ ನಷ್ಟವುಂಟು ಮಾಡಿರುತ್ತಾರೆ. ಇವರ ವಿರುದ್ಧ ಪಿಡಿಒ ಶಶಿಕಲಾ ಕುಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

