ಸುದ್ದಿ

ಪ್ರಧಾನಿ ಮೋದಿಯ ಕೂದಲನ್ನೂ ಅಲ್ಲಾಡಿಸಲು ಸಾಧ್ಯವಿಲ್ಲ-ಗುಟರ್ ಹಾಕಿದ ಹಿಂದೂ ಜಾಗರಣ ವೇದಿಕೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ನ ಹತ್ಯೆಯನ್ನ ಖಂಡಿಸಿ ಇಂದು ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ ಶಿವಪ್ಪ ನಾಯಕ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿತು. ಕೊಲೆಗಟುಕರ ವಿರುದ್ಧ ಘೋಷಣೆ ನಡೆಸಿತು.

ಶಿವಮೊಗ್ಗದಲ್ಲಿ ಹರ್ಷನ ಕೊಲೆ ಮತ್ತು ಮೊನ್ನೆ ನಡೆದ ಕನ್ಹಯ್ಯ ಲಾಲ್ ಕೊಲೆಗೆ ಮುಗಿಯದಿದ್ದರೆ, ಹಿಂದೂ ಸಮಾಜ ಬಹಳದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಕೊಲೆಗಟುಕರು ಪ್ರಧಾನಿ ಮೋದಿಯನ್ನೂ ಅವಕಾಶ ಸಿಕ್ಕರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ವಿಶ್ವವಿಖ್ಯಾತರಾಗಿರುವ ಪ್ರಧಾನಿ ಮೋದಿಯ ಕೂದಲನ್ನೂ ಅಲ್ಲಾಡಿಸಲು ಆಗುವುದಿಲ್ಲ. ಏನಾದರೂ ಪ್ರಧಾನಿ‌ಮೋದಿಯ ವಿಷಯಕ್ಕೆ ಬಂದರೆ ನಿಮ್ಮ ಸಾಮಾನುಗಳನ್ನ ಕಟ್ಟಿಕೊಂಡು ಬೇರೆಡೆ ಹೋಗುವ ಪರಿಸ್ಥಿತಿ ಎದುರಾಗಲಿದೆ ಎಂದು ಗದರಿಸಿದ್ದಾರೆ.

ಎಸ್ ಡಿಪಿಐ, ಪಿಎಫ್ಐ ಮತ್ತು ಜಿಹಾದಿ ಮನೋಭಾವವುಳ್ಳವರ ವಿರುದ್ಧ ವೇದಿಕೆ ಘೋಷಣೆ ಕೂಗಿತು. ಮೊನ್ನೆ ಹರ್ಷ, ನಿನ್ನೆ ಕನ್ಹಯ್ಯ ನಾಳೆ ನೀವು ಎಚ್ಚರಗೊಳ್ಳಿ ಹಿಂದೂಗಳೇ ಎಂಬ ಘೋಷಣೆಗಳನ್ನ ವೇದಿಕೆ ಘೋಷಿಸಿತು.

ಪ್ರತಿಭಟನೆಯಲ್ಲಿ ವೇದಿಕೆಯ ದೇವರಾಜ್ ಸತೀಶ, ಗರುರಾಜ್, ಮೊದಲಾದ ಯುವಕರು ಭಾಗಿಯಾದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button