ಉದ್ಯೋಗವಾರ್ತೆ

ಡಿವಿಎಸ್ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ಉದ್ಯೋಗ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್

IMG-20220630-WA0225

ಸುದ್ದಿಲೈವ್.ಕಾಂ/ಶಿವಮೊಗ್ಗ

ಉದ್ಯೋಗ ಯಾರಿಗೆ ಬೇಡ, ಉದ್ಯೋಗಕ್ಕಾಗಿ ಡಿವಿಎಸ್ ಕಾಲೇಜು ಯುವಕರಿಂದ ಇಂದು ತುಂಬಿ ತುಳಕಿದೆ. ಮಧ್ಯಾಹ್ನ 1-00 ರ ವರೆಗೆ ಸುಮಾರು 750 ಜನ ಯುವಕರು ಉದಯೋಗ ಮೇಳದಲ್ಲಿ ಸಂದರ್ಶನವನ್ನ ಎದುರಿಸಿದ್ದಾರೆ

ಡಿವಿಎಸ್ ಪದವಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇಂದು ಉದ್ಯೋಗ ಮೇಳ ನಡೆದಿದೆ. ಆನ್ ಲೈನ್ ನಲ್ಲಿ 1650 ಜನ‌ ಸಂದರ್ಶನಕ್ಕೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಾಗೆ ಸ್ಥಳದಲ್ಲಿ ಬಂದ ಸಂದರ್ಶನ ಪಡೆದುಕೊಂಡವರು 250 ಜನರಿದ್ದಾರೆ.

ಶಾಂತಲಾ, ಗ್ಯಾಲಿಗಾರ್ ಹೀಗೆ 42 ಕಂಪನಿಗಳು ಈ ಕಾಲೇಜಿನಲ್ಲಿ ಉದ್ಯೋಗಾಕಾಂಕ್ಷಿಗಳ ಸಂದರ್ಶನ ಪಡೆದುಕೊಂಡಿದ್ದಾರೆ. ಸಂಜೆಯ ನಂತರ ಯಾರು ಯಾರು ಉದ್ಯೋಗ ಪಡೆದುಕೊಳ್ಳುತ್ತಾರೆ ಎಂಬ ಸ್ಪಷ್ಟ‌ಚಿತ್ರಣ ಹೊರಬೀಳಲಿದೆ.

ಎಸ್ ಎಸ್ ಎಲ್ ಸಿ ಪಾಸ್ ಮತ್ತು ಫೇಲ್ ಆದ ಯುವಕರಿಂದ ಹಿಡಿದು ಸ್ನಾತಕೋತ್ತರ ಪದವೀದರರ ವರೆಗೆ ಸಂದರ್ಶನವನ್ನ ಪಡೆಯಲು ಈ ಉದ್ಯೋಗ ಮೇಳದಲ್ಲಿ ಅವಕಾಶ ಕಲ್ಪಿಸಲಾಯಿತು. ಒಟ್ಟಿನಲ್ಲಿ ಉದ್ಯೋಗ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ.

ಉದ್ಯೋಗ ಮೇಳವನ್ನ ಗೌರಿಗದ್ದೆಯ ವಿನಯ್ ಗುರೂಜಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಕಾಲೇಜಿನ ಪ್ರಾಂಶುಪಾಲರು, ಚೇಂಬರ್ ಆಫ್ ಕಾಮರ್ಸ್ ನ ಗೋಪಿನಾಥ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು. IMG-20220630-WA0224

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button