ಶಿಕ್ಷಣ

ರೌಂಡ್‌ ಟೇಬಲ್‌ ಇಂಡಿಯಾ ಸಂಸ್ಥೆಯಿಂದ ಶೈಕ್ಷಣಿಕ ವ್ಯವಸ್ಥೆಗೆ ಬೆಳಕು-ಡಾ.ಸರ್ಜಿ

ಸುದ್ದಿಲೈವ್. ಕಾಂ/ಶಿವಮೊಗ್ಗ

ವಿದ್ಯಾರ್ಥಿಗಳ ಶಿಕ್ಷ ಣಕ್ಕೆ ಪೂರಕವಾಗುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರೌಂಡ್‌ ಟೇಬಲ್‌ ಇಂಡಿಯಾ ಸಂಸ್ಥೆಯು ಶೈಕ್ಷ ಣಿಕ ವ್ಯವಸ್ಥೆಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ ಎಂದು ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ದುರ್ಗಿಗುಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಆಂಗ್ಲಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಊಟದ ಹಾಲ್‌ ಉದ್ಘಾಟನಾ ಕಾರ್ಯಕ್ರಮದಲ್ಲಿಭಾಗವಹಿಸಿ ಅವರು ಮಾತನಾಡಿದರು. 40 ವರ್ಷದ ಇತಿಹಾಸ ಹೊಂದಿರುವ ಸಂಸ್ಥೆ ಭಾರತದಲ್ಲಿಶಿಕ್ಷ ಣ ಮೂಲಕ ಸ್ವಾತಂತ್ರ ಎಂಬ ಧ್ಯೇಯದೊಂದಿಗೆ ಮಹತ್ತರ ಕೊಡುಗೆಯನ್ನು ದೇಶಕ್ಕೆ ನೀಡುತ್ತಿ ದೆ ಎಂದು ಹೇಳಿದರು.

ವಿಶೇಷವಾಗಿ ಸರಕಾರಿ ಶಾಲೆಗಳ ದುಸ್ಥಿತಿಯನ್ನು ಸಂಸ್ಥೆ ಸ್ವತಃ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ಕಟ್ಟಡ ನವೀಕರಣ, ಡೈನಿಂಗ್‌ ಹಾಲ್‌, ಬೆಂಚ್‌, ಕ್ಲಾಸ್‌ ರೂಂ, ಶೌಚಾಲಯ ನಿರ್ಮಿಸುವ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ. ಪ್ರತಿ ವರ್ಷ ಭಾರತದಲ್ಲಿ450 ಕ್ಕೂ ಹೆಚ್ಚು ಕ್ಲಾಸ್‌ ರೂಂಗಳನ್ನು ಉದ್ಘಾಟನೆ ಮಾಡುತ್ತಿದೆ.

ಜಿಲ್ಲೆಯಲ್ಲಿಈವರೆಗೂ 42 ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಿದೆ. ನಗರದ ಗಾಡಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯಲ್ಲಿಕ್ಲಾಸ್‌ ರೂಂಗಳನ್ನು ಉದ್ಘಾಟಿಸಲಾಗಿದೆ. ಹೀಗೆ ಸರಾಸರಿ ದಿನವೊಂದಕ್ಕೆ ಒಂದೂವರೆ ಕೊಠಡಿಯನ್ನು ನಿರ್ಮಿಸಿ ಲೋಕಾರ್ಪಣೆ ಮಾಡುತ್ತಾ ಶಿಕ್ಷ ಣಕ್ಕೆ ನೆರವು ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು.

ಕೇವಲ ಶಾಲೆಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೇ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹಾಗೂ ಸರಕಾರಿ ಆರೋಗ್ಯ ಕೇಂದ್ರಗಳ ಅಭಿವೃದ್ಧಿಯನ್ನೂ ಕೈಗೊಳ್ಳುತ್ತಿದೆ. ಕಳೆದ ಮೂರು ವರ್ಷಳ ಹಿಂದೆ ಪ್ರವಾಹ ಪೀಡಿತ ಬಡಾವಣೆಗಳಲ್ಲಿಟೈಪಾಯಿಡ್‌ ಉಚಿತ ಲಸಿಕಾ ಕಾರ್ಯಕ್ರಮವನ್ನು ಉಚಿತವಾಗಿ ಹಮ್ಮಿಕೊಂಡಿತ್ತು ಎಂದು ಹೇಳಿದರು.

ದುರ್ಗಿಗುಡಿಯ ಈ ಸರಕಾರಿ ಶಾಲೆಯೊಂದರಲ್ಲಿ1300 ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆಂದರೆ ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಧೂಮಪಾನ, ಮದ್ಯಪಾನ ಹಾಗೂ ಡ್ರಗ್‌್ಸಗಿಂತ ಬಹಳ ಅಪಾಯಕಾರಿ ಮೊಬೈಲ್‌ ಪೋನ್‌.ಇದು ಮಕ್ಕಳು ಹಾಗೂ ಯುವ ಸಮೂಹದಲ್ಲೊಂದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಅಲ್ಲದೆ ಮಾನಸಿಕ, ಬೌದ್ಧಿಕವಾಗಿ ವ್ಯತಿರಿಕ್ತ ಪರಿಣಾವನ್ನೂ ಬೀರುತ್ತಿದೆ. ಮಕ್ಕಳು ಮೊಬೈಲ್‌ನಿಂದ ದೂರವಿರಬೇಕಾದರೆ ಮೊದಲು ಪೋಷಕರು ಮೊಬೈಲ್‌ ಬಳಕೆ ಕಡಿಮೆ ಮಾಡಬೇಕು. ಕೇವಲ ಓದಲು, ಬರೆಯಲು ಒತ್ತಡ ಹಾಕದೇ ಅವರಿಗೆ ಅಲ್ಪಮಟ್ಟಿಗೆ ಮನರಂಜನೆ ನೀಡುವಂತ ಚಟುವಟಿಕೆ ಹಾಗೂ ಆಟೋಟಗಳಲ್ಲಿತೊಡಗುವಂತೆ ಪ್ರೇರೇಪಿಸಬೇಕು. ಆಗ ಮೊಬೈಲ್‌ ಬಳಕೆ ತನ್ನಿಂದ ತಾನೆ ಕಡಿಮೆ ಆಗುತ್ತದೆ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌ ಅರುಣ್‌ ಮಾತನಾಡಿ, ದುರ್ಗಿಗುಡಿ ಶಾಲೆಗೆ ಅಂದಾಜು 70 ಲಕ್ಷ ರೂ., ಹಾಗೂ ಗಾಡಿಕೊಪ್ಪ ಶಾಲೆಗೆ ಅಂದಾಜು 60 ಲಕ್ಷ ರೂ.ಗಳ ಅನುದಾನದ ಯೋಜನೆಗಳನ್ನು ನೀಡಲಾಗಿದೆ. ಈ ಮೂಲಕ ರೌಂಡ್‌ ಟೇಬಲ್‌ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದರು.
ವಿದ್ಯಾರ್ಥಿಗಳು ಈ ಸೌಲತ್ತುಗಳ ಸದ್ಬಳಕೆ ಮಾಡಿಕೊಂಡು ದೇಶದ ಆಸ್ತಿಯಾಬೇಕು. ಶಿಕ್ಷಕರೂ ಕೂಡ ಹೊಸ ಹುಮ್ಮಸ್ಸಿನೊಂದಿಗೆ ಮಕ್ಕಳ ಸರ್ವಾಂಗೀಣ ಏಳಿಗೆಗೆ ಪಣ ತೊಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೌಂಡ್‌ ಟೇಬಲ್‌ ಇಂಡಿಯಾ ನ್ಯಾಷನಲ್‌ ಪ್ರಾಜೆಕ್‌್ಟ ಕನ್ವಿನಿಯರ್‌ ರಚಿತ್‌ ಬನ್ಸಾಲ್‌, ಪದಾದಿಕಾರಿಗಳಾದ ವಿನಯ್‌ ಟಿ.ಆರ್‌. ಕೌಶಿಕ್‌ ಡಿ.ಎನ್‌, ವಿಶ್ವಾಸ್‌ ಕಾಮತ್‌, ಈಶ್ವರ್‌ ಸರ್ಜಿ, ಕಾರ್ತಿಕ್‌ ಸಿ.ಎಸ್‌ ಭಾಗವಹಿಸಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button