ರಾಜ್ಯ

ಪೊಲೀಸರ ಎದೆಗೆ ಚಾಕು ಹಾಕಿದವನಿಗೆ ತಕ್ಕಪಾಠ-ಆರಗ ಜ್ಞಾನೇಂದ್ರ

ಸುದ್ದಿಲೈವ್. ಕಾಂ/ಶಿವಮೊಗ್ಗ

ಪೊಲೀಸರ ಎದೆಗೆ ಚೂರಿ ಹಾಕುವರಿಗೆ ತಕ್ಕಪಾಠ ಕಲಿಸಲಿದ್ದೇವೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಗುಡುಗಿದ್ದಾರೆ.  ಹಲ್ಲೆ ಮಾಡಿದವರನ್ನ ಬಂಧಿಸಲಾಗಿದೆ.ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಗೃಹಸಚಿವ ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಪೊಲೀಸರು ಎಂದರೆ ಭಯ ಗೌರವ ಎರಡೂ ಇಲ್ಲವಾಗಿದೆ. ಅದನ್ನ ಕಲಿಸುವ ಕೆಲಸವನ್ನ ಮಡುತ್ತೇವೆಂದು  ಗುಡುಗಿದ್ದಾರೆ.

ಸಿದ್ದರಾಮಯ್ಯನವರ ಹೇಳಿಕೆಗೆ ಗೃಹ ಸಚಿವ ತಿರುಗೇಟು

ಸಿದ್ದರಾಮಯ್ಯನವರು ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುರವರನ್ನ ಟೀಕಿಸಿದ್ದು ಬಿಹೆಪಿಯಲ್ಲಿ ಹಿಂದುಳಿದ ಜನಾಂಗ ಅಭ್ಯರ್ಥಿಯನ್ನ ತಂದು ರಾಮನಾಥ್ ಕೋವಿಂದ್ ತರಹನೇ ನಡೆಸಿಕೊಳ್ಳಲಾಗುತ್ತದೆ ಎಂಬ ಮಾತಿಗೆ ಗೃಹ ಸಚಿವ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಅವರೊಬ್ಬರನ್ನ ಹೊರತುಪಡಿಸಿ ಎಲ್ಲರನ್ನೂ ಟೀಕಿಸುವ ರಾಜಕಾರಣಿ, ಹೀಗೆ ಎಲ್ಲರನ್ನೂ ಟೀಕಿಸುತ್ತಾರೆ. ಕಾಂಗ್ರೆಸ್ ಗೆಲ್ಲುವುದಿಲ್ಲ ಎಂಬ ಸತ್ಯ ಅವರಿಗೆ ಅರಿವಿಗೆ ಬಂದಿದೆ. ಹಾಗಾಗಿ ಟೀಕೆಗೆ ಇಳಿದಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಎದೆಮುಟ್ಟಿ ನೋಡಿಕೊಳ್ಳುವಂತೆ ತನೆಖೆ ನಡೆಸುತ್ತೇವೆ

ಪಿಎಸ್ಐ ಮರು ಪರೀಕ್ಷೆಯನ್ನ ಸಿಐಡಿ ತನಿಖೆ ಪೂರ್ಣಗೊಂಡ ನಂತರ ದಿನಾಂಕ ನಿಗದಿ ಪಡಿಸಲಾಗುವುದು ಎಂದರು.

ಅನೃತ್ ಪೌಲ್ ಪಾತ್ರದ ಬಗ್ಗೆ ಮಾತನಾಡಿದ ಗೃಹಸಚಿವರು 7 ಗಂಟೆ ತನಿಖೆ ನಡೆಸಲಾಗಿದೆ.ಸಿಐಡಿಯಲ್ಲಿ ಸಾಕ್ಷಾಧಾರಗಳು ಸಿಗುವವರೆಗೆ ಮುಟ್ಟೋದಿಲ್ಲ ಸರಿಯಾದ ಸಾಕ್ಷಾಧಾರಗಳು ದೊರೆತರೆ ಅವರನ್ನ ಬಿಡೊಲ್ಲ. ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳನ್ನ ಬಿಟ್ಟಿಲ್ಲ. ಸರ್ಕಾರದ ಕಡೆಯಿಂದ ಸಿಐಡಿಗಳಿಗೆ ಫ್ರಹ್ಯಾಂಡ್ ಕೊಡಲಾಗಿದೆ.

ಬೇರೆ ಬೇರೆಯವರು ಒತ್ತಡ ಹಾಕಬಹುದು, ತನಿಖೆ ಆಗಲಿದೆ. ಪರೀಕ್ಷೆಯಲ್ಲಿ ಈ ರೀತಿ ಮಾಡುವರಿಗೆ ಎದೆ‌ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತೇವೆ. ಹಣವಿದ್ದರೆ ಪಿಎಸ್ಐಗೆ ಆಯ್ಕೆಯಾಗುತ್ತೇವೆ ಎಂಬ ಅಪನಂಬಿಕೆಯನ್ನ ಈ ಪ್ರಕರಣದಿಂದ ಹೊರಗಿಡುತ್ತೇವೆ ಎಂದು ಗುಡುಗಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button