ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಬೇಕಿದ್ದ ಯುವಕ ನೀರು ಪಾಲು

ಸುದ್ದಿಲೈವ್. ಕಾಂ/ಶಿವಮೊಗ್ಗ
ನಿನ್ನೆ ಮಧ್ಯಾಹ್ನ ಪುಟ್ಟಪ್ಪನ ಕ್ಯಾಂಪ್ ಬಳಿ ತುಂಗ ನದಿಗೆ ಸ್ನಾನಕ್ಕೆ ಹೋದ ಸೂಳೆಬೈಲಿನ 18 ವರ್ಷದ ಯುವಕ ನೀರು ಪಾಲಾಗಿರುವ ಘಟನೆ ನಡೆದಿದ್ದು, ಯುವಕನ ಪತ್ತೆಗಾಗಿ ತೀವ್ರ ಶೋಧಕಾರ್ಯ ನಡೆದಿದೆ.
ನಿನ್ನೆ ಮಧ್ಯಾಹ್ನ ಸೂಳೆಬೈಲಿನ ನಿವಾಸಿ ಅಬ್ದುಲ್ ರಿಹಾನ್ ಎಂಬ ಯುವಕ ನಾಲ್ವರು ಸ್ನೇಹಿತರೊಂದಿಗೆ ಪುಟ್ಟಪ್ಪನ ಕ್ಯಾಂಪ್ ಬಳಿ ತುಂಗ ನದಿಗೆ ಸ್ನಾನಕ್ಕೆ ತೆರಳಿದ್ದಾನೆ. ನಾಲ್ವರು ಸ್ನೇಹಿತರು ಎದ್ದು ದಡಕ್ಕೆ ತೆರಳಲು ಮುಂದಾಗಿದ್ದಾರೆ.
ಈ ವೇಳೆ ಅಬ್ದುಲ್ ರಿಹಾನ್ ಕೈಚಾವಿದ್ದು ನನ್ನ ಮೇಲಕ್ಕೆ ಎತ್ತಿ ಎಂದು ಕೇಳಿದ್ದಾನೆ. ರಿಹಾನ್ ತಮಾಷೆ ಮಾಡುತ್ತಿದ್ದಾನೆ ಎಂದು ಗದರಿಸಿ ಮೇಲೆ ಬಾ ತಮಾಷೆಮಾಡಬೇಡ ಎಂದಿದ್ದಾರೆ. ಕ್ಷಣ ಮಾತ್ರದಲ್ಲಿ ನೀರಿನಲ್ಲಿ ಮುಳುಗಿದ್ದಾನೆ.
ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ನಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿಯ ವರೆಗೂ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕದಳ ಇಂದು ಬೆಳಿಗ್ಗೆ ಮತ್ತೆ ಶೋಧಕಾರ್ಯ ಮುಂದುವರೆಸಿದ್ದಾರೆ. ಘಟನೆ ತುಂಗಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉಂಬ್ಳೆಬೈಲು ಸರ್ಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಅಭ್ಯಾಸಿಸುತ್ತಿದ್ದ ರಿಹಾನ್ ಮಾರ್ಚ್ ತಿಂಗಳಲ್ಲಿ ಬರೆದ ಪರೀಕ್ಷೆಯಲ್ಲಿ ಒಂದು ಸಬ್ಜೆಕ್ಟ್ ನಲ್ಲಿ ಫೇಲ್ ಆಗಿದ್ದನು. ಇಂದು ಆತ ಪರೀಕ್ಷೆ ಬರೆಯಬೇಕಿತ್ತು. ವಿಧಿ ಆತನನ್ನ ನೀರಿನಲ್ಲಿ ಮುಳುಗಿಸಿದೆ.
