ಸರ್ಕಾರದ ಧೋರಣೆಯನ್ನು ಖಂಡಿಸಿ ದಲಿತರ ಹಕ್ಕೋತ್ತಾಯಗಳಿಗೆ ಅಗ್ರಹಿಸಿ ದಸಂಸ ಅಂಬೇಡ್ಕರ್ ವಾದ ಪ್ರತಿಭಟನೆ

ಸುದ್ದಿಲೈವ್. ಕಾಂ/ಶಿವಮೊಗ್ಗ
ಭೂಮಿ, ವಸತಿ, ವಿದ್ಯಾರ್ಥಿ ವೇತನ, ಹಾಸ್ಟೆಲ್ಗಳ ಮೂಲ ಸೌಲಭ್ಯ ಪಿ.ಐ.ಪಿ.ಎಲ್. ಕಾಯ್ದೆ ತಿದ್ದುಪಡಿ, ನಾಗಲೀಕ ಹಕ್ಕು ಜಾಲ ದಳಕ್ಕೆ ರಕ್ಷಣಾತ್ಯಕ ಅಧಿಕಾರಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಧರಣಿ ನಡೆಸಿದೆ.
ಸಂವಿಧಾನದ ಆಶಯದಂತೆ, ತಳಸಮುದಾಯಗಳ ಏಳಿಗೆಗಾಗಿ ಶ್ರಮಿಸಬೇಕಾದ ಸರ್ಕಾರವು ಉಳ್ಳವರ ಮರ್ಜಿಗೆ ಬಿದ್ದಿದೆ. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯದಂತೆ ದಲಿತ/ದಮನಿತರು ಐಕ್ಯತೆಯ ಹೋರಾಟ ರೂಪಿಸಿ ಸಂವಿಧಾನ ಬದ್ಧ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಬಲಿಷ್ಟ ಚಳುವಳಿಯನ್ನು ಕಟ್ಟಬೇಕು ಎಂದು ಸಂಘಟನೆ ಕರೆ ನೀಡಿದೆ.
ಪ್ರಸಕ್ತ ರಾಜ್ಯ ಸರ್ಕಾರದ ದುರಾಡಳಿತದಲ್ಲಿ ದಲಿತರ, ಬಡವರ, ಮಹಿಳೆಯರ ಸಮಸ್ಯೆಗಳನ್ನು ಕಡೆಗಣಿಸಲಾಗಿದೆ. ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಹಕ್ಕೋತ್ತಾಯಗಳಿಗೆ ಅಗ್ರಹಿಸಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
