ಜೂ.28 ರಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಶಿವಮೊಗ್ಗಕ್ಕೆ

ಸುದ್ದಿಲೈವ್. ಕಾಂ/ಶಿವಮೊಗ್ಗ
ಮಂಗಳವಾರ ಶಿವರಾಮ್ ಹೆಬ್ವಾರ್ ಶಿವಮೊಗ್ಗಕ್ಕೆ ಬರುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಟ್ಟಡ ಕಾರ್ಮಿಕರಿಗೆ ವಸತಿ ಸಮುಚ್ಚಾಯದ ಶಂಕುಸ್ಥಾಪನೆಗೆ ಸಚಿಚರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಜೂ. 28 ಕ್ಕೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ಲೀಪುರ ಮತ್ತು ಉಜ್ಜನೀಪುರದಲ್ಲಿ ನಿರ್ಮಾಣಗೊಳ್ಳಲುರುವ ಕಾರ್ಮಿಕರ ವಸತಿ ಸಮುಚ್ಛಾಯದ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಈ ಸಮುಚ್ಛಾಯಗಳನ್ನ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ನೆರವೇರಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆ ಇದರಲ್ಲಿ ಒಂದಾಗಿದೆ. ಸಿದ್ಲೀಪುರ ಗ್ರಾಮದಲ್ಲಿ 10 ಕೋಟಿಯಲ್ಲಿ ವಲಸೆ ಕಾರ್ಮಿಕರಿಗೆ ವಸತಿ ನಿರ್ಮಿಸಲಾಗುತ್ತಿದೆ. 96 ಕೊಠಡಿ, 450 ಕಾರ್ಮಿಕರಿಗೆ ಒದಗಿಸಲಾಗುತ್ತಿದೆ ಎಂದರು.
ಅಂದು ಮಧ್ಯಾಹ್ನ 12-30 ಗೆ ಉಜನೀಪುರ ಎರಡು ಎಕರೆ ಜಾಗದಲ್ಲಿ ಕಾರ್ಮಿಕ ಭವನ ನಿರ್ಮಿಸಲಾಗುತ್ತಿದೆ. 5 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣದ ಶಂಕು ಸ್ಥಾಪನೆ ಆಗಲಿದೆ. ಜೊತೆಗೆ ನೋಂದಾಯಿತ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.ಈ ಕಾರ್ಯಕ್ರಮ ಕುವೆಂಪು ರಂಗ ಮಂದಿರದಲ್ಲಿ ನಡೆಯಲಿದೆ ಎಂದರು.
ಎಲ್ಲಿ ಕಾರ್ಮಿಕರು ಹೆಚ್ಚು ಇದ್ದಾರೆಅಲ್ಲಿ ಹೆಲ್ತ್ ಚೆಕಪ್ ಕ್ಯಾಂಪ್ ಮಾಡಲಾಗುತ್ತಿದೆ. ಕ್ಯಾಂಪ್ ನಲ್ಲಿ ತೊಂದರೆ ಕಾಣಿಸಿಕೊಂಡರೆ ಅವರಿಗೆ ಚಿಕಿತ್ಸೆ ಕೊಡಿಸಲಾಗುವುದು. ಒಂದು ವೇಳೆ ಹಣ ವ್ಯಯವಾದರೆ ಕಾರ್ಮಿಕರ ನಿಗಮದಿಂದ ಅವರಿಗೆ ಹಣ ವಾಪಾಸ್ ಮಾಡುವ ವ್ಯವಸ್ಥೆಯೂ ನಡೆದಿದೆ ಎಂದರು.
