ಆಶ್ರಯ ಮನೆ ಖರೀದಿ ವಿಚಾರದಲ್ಲಿ ಗೊಂದಲ-ಮಾರಾಟಗಾರರಿಂದ ಖರೀದಾರ ಮೇಲೆ ಹಲ್ಲೆಯ ಆರೋಪ

ಸುದ್ದಿಲೈವ್. ಕಾಂ/ಶಿವಮೊಗ್ಗ
ಬೊಮ್ಮನ್ ಕಟ್ಟೆಯ ಆಶ್ರಯ ಮನೆಯ ಮಾರಾಟದ ವಿಚಾರದಲ್ಲಿ ಖರೀದಿದಾರರು ಮತ್ತು ಮಾರಾಟಗಾರರ ನಡುವೆ ವ್ಯತ್ಯಾಸವಾಗಿದ್ದು ಮಾರಾಟಗಾರರು ಸ್ವತ್ತಿನ ಕ್ರಯ ಪತ್ರವನ್ನ ಖರೀದಿದಾರರ ಹೆಸರಿಗೆ ವರ್ಗಾಯಿಸಿದ ಹೆಚ್ಚಿನ ಹಣದ ಬೇಡಿಕೆಯೊಂದಿಗೆ ಹಲ್ಲೆ ನಡೆಸಿರುವ ಆರೋಪವನ್ನ ಮಾಡಿದ್ದಾರೆ.
ಸರ್ಕಾರಿ ಪೌರಕಾರ್ಮಿಕ ಕೆಲಸ ಮಾಡಿಕೊಂಡು ಬಂದಿರುವ ಮಹಿಳೆಯೊಬ್ಬರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಿವಮೊಗ್ಗ ನಗರದ, 1 ನೇ ವಾರ್ಡನ, ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ, ಎ ಬಾಕ್ ನಲ್ಲಿರುವ ಮನೆಯನ್ನ ರಾಜಪ್ಪ ಎಂಬುವರಿಂದ 16,50,000/- ರೂ.ಗೆ ಖರೀದಿಸಿದ್ದರು.
2019 ರಲ್ಲಿಯೇ ಮಹಿಳೆ ರಾಜಪ್ಪನವರಿಗೆ ಸಂಪೂರ್ಣ ಹಣ ಪಾವತಿಸಿದ್ದರು, ಕಾರರಿನಂತೆ ಸೂಕ್ತ ದಾಖಲಾತಿಗಳೊಂದಿಗೆ ಬಂದು ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಮಹಿಳೆಯ ಹೆಸರಿಗೆ ನೋಂದಾಯಿಸಿಕೊಡುತ್ತೇನೆ ಎಂದು ರಾಜಪ್ಪ ಈ ಹಿಂದೆ ಒಪ್ಪಿದರೂ ಇದುವರೆಗೂ ಮನೆ ಮಾರಾಟಗಾರರಾದ ರಾಜಪ್ಪ ಹೆಸರು ನೋಂದಾಯಿಸಿಕೊಡದೆ ಪದೇ ಪದೇ ಹೆಚ್ಚಿನ ಹಣ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ರಾತ್ರಿ ಕುಡಿದು ಮಹಿಳೆಯ ಮನೆಗೆ ಬಂದ ರಾಜಪ್ಪ ಬಾಗಿಲನ್ನ ಕಲ್ಲಿನಿಂದ ಒಡೆದಿದ್ದಾನೆ. ಮನೆಯ ಬಾಗಿಲು ತೆರೆಯುತ್ತಿದ್ದಂತೆ ಅತಿಕ್ರಮಣ ಪ್ರವೇಶ ಮಾಡಿದ ಆತನು ನನ್ನ ಮೇಲೆ ಹಲ್ಲೆ ಮಾಡಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.
