ವೈದ್ಯರನ್ನೂ ವಂಚಿಸಿದ ಕ್ಯಾ.ಶಶಿಕುಮಾರ್

ಸುದ್ದಿಲೈವ್. ಕಾಂ/ಶಿವಮೊಗ್ಗ
ಕ್ಯಾಪ್ಟನ್ ಶಶಿಕುಮಾರ್ ಹೆಸರಿನಲ್ಲಿ ವೈದ್ಯರಿಗೆ ಕರೆ ಬಂದಿದ್ದು , ಎನ್ ಸಿಸಿ ಕಾರ್ಯಕರ್ತರಿಗೆ ಕೊರೋನ ಲಸಿಕೆ ನೀಡಬೇಕೆಂದು ಅದಕ್ಕೆ ತಗಲುವ ವೆಚ್ಚವನ್ನ ತಮ್ಮ ಬ್ಯಾಂಕ್ ಖಾತೆಗೆ ಹಾಕುವುದಾಗಿ ನಂಬಿಸಿ ವೈದ್ಯರೊಬ್ಬರಿಗೆ ವಂಚಿಸಿದ್ದಾನೆ.
ಈ ಹಿಂದೆ ಆರ್ಕೆಸ್ಟ್ರಾ ನಡೆಸುವ ಅಂಧ ದಂಪತಿಗಳಿಗೆ ಮಿಲಿಟರಿ ಮ್ಯಾನ್ ಎಂಬ ಹೆಸರಿನಲ್ಲಿ ಕರೆ ಮಾಡಿ ತಮ್ಮ ಮಿಲಿಟರಿ ಆಫೀಸರ್ ಒಬ್ಬರು ನಿವೃತ್ತಿಯಾಗುತ್ತಿದ್ದು ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ತಮ್ಮ ಆರ್ಕೆಸ್ಟ್ರಾ ನಡೆಸಿಕೊಡಬೇಕೆಂದು ನಂಬಿಸಿ ಅವರ ಬ್ಯಾಂಕ್ ಖಾತೆಯಿಂದ ಹಣವನ್ನ ವರ್ಗಾಯಿಸಿ ವಂಚಿಸಿದ್ದ ಘಟನೆ ನಡೆದಿತ್ತು.
ಅದೇ ರೀತಿ ಈಗ ವೈದ್ಯರೊಬ್ಬರಿಗೆ ಲಸಿಕೆಯ ಹೆಸರಿನಲ್ಲಿ 1,01372 ರೂ. ಹಣವನ್ನ ವಂಚಿಸಿದ್ದಾನೆ. ಮಲಿಕಾರ್ಜುನ ಕ್ಲಿನಿಕ್ ನಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದವರಿಗೆ , ಕ್ಯಾಪ್ಟನ್ ಶಶಿಕುಮಾರ ಎಂಬಾತನು ಕರೆ ಮಾಡಿ ತಾನು ಮಿಲೆಟರಿ ಅಪೀಸರ್ ಎಂದು ಹೇಳಿಕೊಂಡು, ಎನ್.ಸಿ.ಸಿ ಕಾಮಾಂಡರ್ ಮತ್ತು ನಮ್ಮ ಎನ್.ಸಿ.ಸಿ ಕಾರ್ಯಕರ್ತರಿಗೆ ಕೋವಿಡ್ ನಿರೋದಕ ಔಷದಿ ನೀಡಬೇಕಿದ್ದು, ಅದಕ್ಕೆ ತಗಲುವ ವೆಚ್ಚದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾಮಾಡುತ್ತೇನೆ ಎಂದು ಹೇಳಿ ವೈದ್ಯರ ಬ್ಯಾಂಕ್ ಖಾತೆಯ ನಂಬರ್ ಪಡೆದುಕೊಂಡಿದ್ದಾನೆ..
ಅತನ ಮಾತನ್ನ ನಂಬಿದ ವೈದ್ಯರು ತಮ್ಮ ಬ್ಯಾಂಕ್ ಖಾತೆ ನಂಬರ್ ನ್ನ ನೀಡಿದ್ದಾರೆ. ಆರೋಪಿ ಮೊದಲು ತನ್ನ ಮೊಬೈಲ್ ನಂಬರಿಗೆ ಒಂದು ರೂ. ಕಳುಹಿಸಿ ಎಂದು ಹೇಳಿ ಹಣ ಹಾಕಿಸಿಕೊಂಡು ನಂತರ 2,500/- ರೂ., 9,562/- ರೂ ಹೀಗೆ ಹಂತ ಹಂತವಾಗಿ ಒಟ್ಟು 21,624/- ರೂ ಹಾಕಿಸಿಕೊಂಡಿದ್ದಾನೆ. ನಾನು ಹಣಹಾಕಲು ನಿಮ್ಮ ಖಾತೆಯಲಿ 50,000/ ರೂ ಇರಬೇಕು ಈಗ ನೀಡಿರುವ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ ಆದ್ದರಿಂದ 50, ಸಾವಿರ ರೂ. ಬ್ಯಾಲೆನ್ಸ ಇರುವ ಬ್ಯಾಂಕ್ ಖಾತೆ ಇದ್ದರೆ ಕೊಡಿ ಅಂತ ಕೇಳಿದ್ದಾನೆ.
ವೈದ್ಯರು ಆತನ ಮಾತನ್ನ ನಂಬಿ ತಮ್ಮ ಇನ್ನೊಂದು ಬ್ಯಾಂಕ್ ಅಕೌಂಟ್ ನೀಡಿದ್ದು, ಅದರಂದ ವಂಚಕ ಕ್ಯಾ.ಶಶಿಕುಮಾರ್ 43,248/- ರೂ, 21500/- ರೂ 15000/- ರೂ ಹೀಗೆ ಹಂತ ಹಂತವಾಗಿ ಅವನ ಖಾತೆ ನಂಬರ್ ಗೆ ಮೊಬೈಲ್ ಮುಖಾಂತರ ಓಟ್ಟು ಹಂತ ಹಂತವಾಗಿ 1,01372/- ರೂ ಹಣ ಹಾಕಿಸಿಕೊಂಡು ನಂತರ ಇನ್ನಷ್ಟು ಬೇಡಿಕೆ ಇಡಲು ಮುಂದಾಗಿದ್ದಾನೆ. ವೈದ್ಯರು ಜೋರಾಗಿ ಗದರಿಸಿದಾಗ ಕ್ಯಾಪ್ಟನ್ ನ ದೂರವಾಣಿ ಬಂದ್ ಆಗಿರುತ್ತದೆ. ಈತನ ವಿರುದ್ಧ ವೈದ್ಯರು ವಿನೋಬ ನಗರದಲ್ಲಿ ದೂರು ನೀಡಿದ್ದಾರೆ.
