ಮದುವೆಗೆ ಹೋಗಿ ಬರುವುದರೊಳಗೆ ಮನೆ ಕಳ್ಳತನ-ಹಣ ನಗದು ಕಳವು

ಸುದ್ದಿಲೈವ್. ಕಾಂ/ಶಿವಮೊಗ್ಗ
ಭಟ್ಕಳಕ್ಕೆ ಮದುವೆಗೆ ತೆರಳಿದ್ದ ವೇಳೆ ಮನೆಕಳ್ಳತನವಾಗಿದೆ. ಅಣ್ಣಾ ನಗರದ 8 ನೇ ತಿರುವಿನಲ್ಲಿ ವೆಲ್ಡಿಂಗ್ ಕೆಲಸಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಮನೆಯಲ್ಲಿ ಕಳ್ಳತನವಾಗಿದೆ.
ಜೂ.15 ರಂದು ಸಂಜೆ 06-30 ಗಂಟೆಯ ಸಮಯದಲ್ಲಿ ಮನೆಯ ಬಾಗಿಲಿಗೆ ಇಂಟರ್ ಲಾಕ್ ಬೀಗ ಹಾಕಿಕೊಂಡು ಭಟ್ಕಳದಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಜೂ.22 ಕ್ಕೆ ಮನೆಗೆ ಬಂದು ನೋಡಿದ ಸಿರಾಜ್ ಖಾನ್ ಗೆ ಶಾಕ್ ಆಗಿದೆ.
ಮನೆಯ ಮುಂಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುದದಿಂದ ಮೀಟಿ ಬಾಗಿಲು ಮುರಿದು ಬೆಡ್ ರೂಂ ನಲ್ಲಿರುವ ಬೀರುವನ್ನು ಸಹ ಯಾವುದೋ ಆಯುಧದಿಂದ ಮೀಟಿ ಬಾಗಿಲು ತೆಗೆದು ಅದರಲಿದ್ದ ಬಟ್ಟೆ ಬರೆ ಮತ್ತು ಸಾಮಾನುಗಳು ಚೆಲ್ಲಾಪಿಲಿ ಮಾಡಿರುವ ದೃಶ್ಯ ಕಂಡು ಬಂದಿದೆ.
ಬೀರುವಿನಲ್ಲಿದ 34,000/- ರೂ ನಗದು ಹಣ, 5 ಗ್ರಾಂ. ತೂಕದ ಕಟ್ಟಾಗಿರುವ ಉಂಗುರ, 4 ಗ್ರಾಂ ತೂಕದ 2 ಸಣ್ಣ ಮಕ್ಕಳ ಉಂಗುರ, 5 ಗ್ರಾಂ, ತೂಕದ ಕಿವಿಯೋಲೆ, 8 ಗ್ರಾಂ, ತೂಕದ ಹಳೆಯ ಮಾಂಗಲ್ಯ ಸರಸೇರಿ ಒಟ್ಟು 22 ಗ್ರಾಂ ತೂಕದ ಬಂಗಾರ, ಅಂದಾಜು ಮೌಲ್ಯ 62,000/- ರೂ ಹಾಗೂ 34,000/- ರೂ ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಸಿರಾಜ್ ಖಾನ್ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
