ಕ್ರೈಂ
ಮೂತ್ರ ವಿಸರ್ಜನೆಗೆ ತೆರಳಿದಾಗ ಅಪರಿಚಿತ ಯುವಕರಿಂದ ಹಲ್ಲೆ-ಸಿಸಿ ಟಿವಿಯಲ್ಲಿ ಸೆರೆಯಾದ ಘಟನೆ

ಸುದ್ದಿಲೈವ್. ಕಾಂ/ಶಿವಮೊಗ್ಗ
ಮದುವೆಗೆ ಬಂದು ಮೂತ್ರ ವಿಸರ್ಜನೆಗೆ ಮುಂದಾಗಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಕೆ.ಆರ್.ಪುರಂನ ಶ್ರೀರಾಮ ಕಲ್ಯಾಣ ಮಂದಿರದ ಎದುರುಗಿನ ಕನ್ಸರ್ ವೆನ್ಸಿಯಲ್ಲಿ ನಡೆದಿದೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಎಂಕೆಕೆ ರಸ್ತೆಯ ನಿವಾಸಿ ಸುಬ್ರಹ್ಮಣಿ ಎಂಬುವರು ಮೊನ್ನೆ ಕೆ.ಆರ್ ಪುರಂನ ಶ್ರೀರಾಮಕಲ್ಯಾಣ ಮಂಟಪದಲ್ಲಿ ಪರಿಚಯಸ್ತರ ಮದುವೆಗೆ ಹೋಗಿದ್ದು ರಾತ್ರಿ 11 ಗಂಟೆಗೆ ಮೂತ್ರ ವಿಸರ್ಜನೆಗೆ ಎಂದು ಕಲ್ಯಾಣ ಮಂದಿರದ ಎದುರಿನ ಕನ್ಸರ್ ವೆನ್ಸಿಗೆ ತೆರಳಿದಾಗ ಅಪರಿಚಿತ ಯುವಕರು ಹೊಡೆದು ಹಲ್ಲೆ ನಡೆಸಿದ್ದಾರೆ.
ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವಕರು ಉರ್ದು ಭಾಷೆಯಲ್ಲಿ ಮಾತನಾಡುತ್ತಿರುವುದಾಗಿ ಮಾಹಿತಿ ನೀಡಿರುವ ಸುಬ್ರಹ್ಮಣಿ ಆ ಯುವಕರು ಮುಷ್ಠಿಕಟ್ಟಿ ಹೊಡೆದಿದ್ದು ರಕ್ತಗಾಯವಾಗಿದೆ ಎಂದು ತಿಳಿಸಿದ್ದಾರೆ.
ಇಬ್ಬರು ಅಪರಿಚಿತ ಯುವಕರ ವಿರುದ್ಧ ಸುಬ್ರಹ್ಮಣಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
