ಪಿಎಂ ಬಿಸಿನೆಸ್ ಲೋನ್ ಪಡೆಯಲು ಮುಂದಾದ ರೈತನಿಗೆ ಆನ್ ಲೈನ್ ವಂಚನೆ

ಸುದ್ದಿಲೈವ್. ಕಾಂ/ಸಾಗರ
ಪಿಎಂ ಬಿಸಿನೆಸ್ ಲೋನ್ ಪಡೆಯಲು ಮುಂದಾದ ರೈತನೋರ್ವ ಆನ್ ಲೈನ್ ವಂಚನೆಗೆ ಒಳಗಾಗಿದ್ದಾನೆ. 90,200 ರೂ. ಹಣ ಕಳೆದುಕೊಂಡಿದ್ದಾನೆ.
ತಡಗಳಲೆ ಗ್ರಾಮದ ಮಹಬಲೇಶ್ವರ ತಂದೆ ಜಟ್ಟಪ್ಪರ ಮೊಬೈಲ್ ನಂಬರ್ ಗೆ ಶೇಕಡ 50% ಪಿಎಂ ಬಿಸಿನೆಸ್ ಲೋನ್ ಸಬ್ಸಿಡಿ ಕೊಡುವುದಾಗಿ ಮೆಸೇಜ್ ಬಂದಿರುತ್ತದೆ. ಆ ನಂಬರ್ ಗೆ ಕಾಲ್ ಮಾಡಿದಾಗ ಆಧಾರ್ ಕಾರ್ಡ ಝರಾಕ್ಸ್ ಪೋಟೋ,ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪಾನ್ ಕಾರ್ಡ ಝರಾಕ್ಸ್ ಕಳುಹಿಸಿದರೆ ನಿಮಗೆ 25 ಲಕ್ಷ ಲೋನ್ ಮಾಡಿಕೊಡುತ್ತೇವೆ. ರಿಜಿಸ್ಟರ್ ಚಾರ್ಜ 7,200/-ರೂ ಕಟ್ಟಬೇಕು ಎಂದು ತಿಳಿಸಿರುತ್ತಾರೆ.
ಅವರು ತಿಳಿಸಿದ ಸುಭಾಷ್ ಉಪಾಧ್ಯ ಎಂಬುವರ ಅಕೌಂಟ್ ನಂಬರ್ ಗೆ ಪೋನ್ ಪೇ ನಿಂದ 7,200/-ರೂ ಹಣವನ್ನು ಮಹಬಲೇಶ್ವರ್ ತುಂಬಿರುತ್ತಾರೆ. ನಂತರ ಟ್ಯಾಕ್ಸ್ ಕಟ್ಟಲು 22,600/-ರೂ ಹಣ ತುಂಬಬೇಕು, ಆರ್ ಬಿಐ ಟ್ಯಾಕ್ಸ್ ಕಟ್ಟಲು 30,700/-ರೂ ತುಂಬಬೇಕು.
ಆತ ಹೇಳಿದಂತೆ ರೈತ ಮಹಬಲೇಶ್ವರರವರು ಸುಔಅಷ್ ಉಪಾಧ್ಯರ ಬ್ಯಾಂಕ್ ಅಕೌಂಟ್ ಗೆ ತುಂಬಿರುತ್ತಾರೆ. 90,200 ರೂ ಹಣ ತುಂಬಿಸಿಕೊಂಡ ಸುಭಾಷ್ ಉಪಾಧ್ಯ ನಂತರ ಮಹಬಲೇಶ್ವರರವರ ಯಾವುದೇ ಕರೆ ಸ್ವೀಕರಿಸಿರುವುದಿಲ್ಲ
ಸಬ್ಸಿಡಿ ಹಣ ಹಾಕುವುದಾದಾಗಿ ನಂಬಿಸಿ ಹಣ ಕಟ್ಟಿಸಿಕೊಂಡು ವಂಚಿಸಿದ ಆನ್ ಲೈನ್ ವಂಚಕರ ವಿರುದ್ಧ . ಕಾನೂನು ಕ್ರಮ ಜರುಗಿಸುವಂತೆ ಮಹಬಲೇಶ್ವರ್ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
