ತಾಲ್ಲೂಕು ಸುದ್ದಿ

SAIL-VISL ನ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಬಿ.ಎಲ್ ಚಂದ್ವಾನಿ ಅಧಿಕಾರ ಸ್ವೀಕಾರ

ಸುದ್ದಿಲೈವ್.ಕಾಂ/ಭದ್ರಾವತಿ

SAIL-VISL ನ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಬಿ.ಎಲ್ ಚಂದ್ವಾನಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಬಿ.ಎಲ್ ಚಾಂದ್ವಾನಿರವರು ಫಿಲಾಯ್, ಸ್ಟೀಲ್ ಪ್ಲಾಂಟ್‌ ನಲ್ಲಿ ಕೋಕ್ ಓವನ್, ಸ್ಟೀಲ್ ಮೇಕಿಂಗ್ ಶಾಪ್, ಮೈನ್‌, ಬ್ಲಾಸ್ಟ್ ಫರ್ನೇಸ್‌ನ (ಮೆಕ್ಯಾನಿಕಲ್‌) ವಿಭಾಗ ಮತ್ತು ಆದರು ನಿರ್ವಹಣೆ ಸ್ಥಾವರದಲ್ಲಿ ಕೆಲಸ ಮಾಡಿದ ಅಪಾರ ಅನುಭವವನ್ನು  ಹೊಂದಿದ್ದಾರೆ.

ಫಲಾಯ್ ಸ್ಟೀಲ್ ಪ್ಲಾಂಟ್‌ಗೆ ಮ್ಯಾನೇಜ್ ಮೆಂಟ್ ಟ್ರೈನಿ/ ಗ್ರಾಜುಯೇಟ್ ಇಂಜಿನಿಯರ್ ಆಗಿ 1989ರಲ್ಲಿ ಸೇರಿದರು ಮತ್ತು 2018ರಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಹುದ್ದೆಗೆ ಏರಿದರು.2005ರಲಿ ಇಂಗ್ಲೆಂಡ್‌ನಲ್ಲಿ ವಿದೇಶಿ ತರಬೇತಿಯನ್ನು ಹೊಂದಿದವರಾಗಿದ್ದಾರೆ.

ಪ್ರಾಯೋಗಿಕ ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವ ಆಶಾವಾದದ ವ್ಯಕ್ತಿಯಾದ ಅವರು VISL ಸವಾಲನ್ನು ಎದುರಿಸುತ್ತಿರುವ ಸಮಯದಲ್ಲಿ ಅದರ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಇವರ ಮೇಲೆ ವಿಐಎಸ್ ಎಲ್ ನ ಸಿಬ್ಬಂದಿಗಳ ನಿರೀಕ್ಷೆ ದೊಡ್ಡಮಟ್ಟದಲ್ಲಿದೆ.

ಅವರು 2013 ರಲ್ಲಿ ಭಿಲಾಯ್ ಸ್ಪೀಲ್ ಪ್ಲಾಂಟ್’ ಮಟ್ಟದ ‘ಜವಾಹರ್‌ ಪ್ರಶಸ್ತಿ’ ಮತ್ತು 1997 ಮತ್ತು 1998ರಲ್ಲಿ ಎರಡು ಬಾರಿ `ರಾಷ್ಟ್ರೀಯ ವಿಶ್ವಕರ್ಮ ಪ್ರಶಸ್ತಿ’ಯನ್ನು ಪಡೆದಿರುತ್ತಾರೆ.

ಇಂದು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕರಾಗಿ ಅಧಿಕಾರವನ್ನು  ಪ್ರಭಾರಿ ಕಾರ್ಯಪಾಲಕ ನಿರ್ದೇಶಕ ಮತ್ತು ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಸುರಜೀತ್‌ ಮಿಶ್ರರಿಂದ ಅಧಿಕಾರ ಸ್ವೀಕರಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button