ಬೆಳೆಗಳಿಗೆ ಶಿಫಾರಿತ ಪೋಷಕಾಂಶ ಒದಗಿಸುವ ವಿವಿಧ ಶ್ರೇಣಿಯ ರಸಗೊಬ್ಬರ ಮಾಹಿತಿ

ಸುದ್ದಿಲೈವ್. ಕಾಂ/ಶಿವಮೊಗ್ಗ
ಸಸ್ಯಗಳ ಬೆಳವಣಿಗೆಗೆ ಸಮಗ್ರ ಪೋಷಕಾಂಶಗಳು ಅವಶ್ಯಕತೆಯಿದ್ದು ಬೆಳೆಗಳಿಗೆ ಬೇಕಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ಗಳನ್ನು ರಾಸಾಯನಿಕ ರಸಗೊಬ್ಬರ ಬಳಸುವುದರ ಮೂಲಕ ಒದಗಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ರೈತರು ಒಂದು ಅಥವಾ ಎರಡು ಪೆÇೀಷಕಾಂಶ ಒದಗಿಸುವ ಯೂರಿಯಾ ಮತ್ತು ಡಿಎಪಿ ಶ್ರೇಣಿಯ ರಸಗೊಬ್ಬರಗಳಿಗೆ ಹೆಚ್ಚು ಅವಲಂಬಿತಾಗಿರುವುದು ಕಂಡು ಬಂದಿರುತ್ತದೆ.
ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಒಂದೇ ಪೋಷಕಾಂಶ ಒದಗಿಸುವ ನೇರ ರಸಗೊಬ್ಬರಗಳಲ್ಲದೇ, ಎರಡು, ಮೂರು ಹಾಗೂ ನಾಲ್ಕು ಪೋಷಕಾಂಶಗಳನ್ನು ಒದಗಿಸುವ ಸಾರಜನಕ, ರಂಜಕ ಮತ್ತು ಪೆÇಟ್ಯಾμïಯುಕ್ತ ಸಂಕೀರ್ಣ ರಸಗೊಬ್ಬರಗಳು ಸಹ ದೊರೆಯುತ್ತಿವೆ.
ಜಿಲ್ಲೆಯಲ್ಲಿನ ಪ್ರಮುಖ ಕೃಷಿ ಬೆಳೆಗಳಾದ ಭತ್ತ ಮತ್ತು ಮುಸುಕಿನ ಜೋಳ ಬೆಳೆಗಳಿಗೆ ಶಿಫಾರಿತ ಪೆÇೀಷಕಾಂಶಗಳನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ದರ್ಜೆಯ ರಸಗೊಬ್ಬರಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸಂಯೋಜಿಸಿ ಬಳಸಿ ಒದಗಿಸಬಹುದಾಗಿದ್ದು ಯೂರಿಯಾ ಮತ್ತು ಡಿಎಪಿ ಶ್ರೇಣಿ(ಗ್ರೇಡ್) ರಸಗೊಬ್ಬರಗಳ ಹೆಚ್ಚಿನ ಅವಲಂಬನೆಯನ್ನು ಕಡಿಮೆ ಮಾಡಬಹುದಾಗಿರುತ್ತದೆ.
ಭತ್ತದ ನೀರಾವರಿ ಬೆಳೆಗೆ ಒಂದು ಎಕರೆಗೆ 50:25:25 ಕೆ.ಜಿ ಸಾರಜನಕ, ರಂಜಕ, ಪೊಟಾಷಿಯಂ ಅವಶ್ಯಕತೆಯಿದ್ದು ವಿವಿಧ ಗ್ರೇಡ್ ರಸಗೊಬ್ಬರಗಳ ಸಂಯೋಜನೆ ಪ್ರಮಾಣವನ್ನು ಈ ರೀತಿ ಸಂಯೋಜಿಸಬಹುದು.
ಯೂರಿಯಾ- 108 ಕೆ.ಜಿ, ಸೂಪರ್- 156 ಕೆಜಿ, ಪೊಟಾಷಿಯಂ- 42ಕೆಜಿ. ಯೂರಿಯಾ- 87 ಕೆ.ಜಿ, ಡಿಎಪಿ- 54 ಕೆಜಿ, ಪೊಟಾಷಿಯಂ – 42 ಕೆಜಿ. ಯೂರಿಯಾ- 55 ಕೆ.ಜಿ, ಪೊಟಾಷಿಯಂ- 42 ಕೆಜಿ. 20:20:0:13-125 ಕೆಜಿ. ಯೂರಿಯಾ- 87 ಕೆ.ಜಿ, 10:26:26- 96 ಕೆಜಿ. ಯೂರಿಯಾ- 55 ಕೆ.ಜಿ, 15:15:15- 167 ಕೆಜಿ.
ಯೂರಿಯಾ- 55 ಕೆ.ಜಿ, 17:17:17- 145 ಕೆಜಿ. ಯೂರಿಯಾ- 88 ಕೆಜಿ, 12:32:16- 78 ಕೆಜಿ.ಪೊಟಾಷಿಯಂ – 21 ಕೆಜಿ.
ಮುಸುಕಿನ ಜೋಳ ಮಳೆಆಶ್ರಿತ ಬೆಳೆಗೆ ಒಂದು ಎಕರೆಗೆ 40:20:10 ಕೆ.ಜಿ ಸಾರಜನಕ, ರಂಜಕ, ಪೊಟಾಷಿಯಂ ಅವಶ್ಯಕತೆಯಿದ್ದು ವಿವಿಧ ಗ್ರೇಡ್ ರಸಗೊಬ್ಬರಗಳ ಸಂಯೋಜನೆ ಪ್ರಮಾಣ ಈ ರೀತಿ ಸಂಯೋಜಿಸಬಹುದು.
ಯೂರಿಯಾ- 87 ಕೆ.ಜಿ, ಸೂಪರ್- 125 ಕೆಜಿ.ಪೊಟಾಷಿಯಂ – 17 ಕೆಜಿ. ಯೂರಿಯಾ- 70 ಕೆ.ಜಿ, ಡಿಎಪಿ- 44 ಕೆಜಿ., ಪೊಟಾಷಿಯಂ – 17 ಕೆಜಿ. ಯೂರಿಯಾ- 44 ಕೆ.ಜಿ. ಪೊಟಾಷಿಯಂ – 17 ಕೆಜಿ. 20:20:0:13– 100 ಕೆಜಿ. ಯೂರಿಯಾ- 79 ಕೆ.ಜಿ. 10:26:26– 38 ಕೆಜಿ. ಸೂಪರ್– 62 ಕೆಜಿ. ಯೂರಿಯಾ- 66 ಕೆ.ಜಿ. 15:15:15– 67 ಕೆಜಿ. ಸೂಪರ್– 62 ಕೆಜಿ. ಯೂರಿಯಾ- 66 ಕೆ.ಜಿ. 17:17:17– 58ಕೆಜಿ. ಸೂಪರ್– 62 ಕೆಜಿ. ಯೂರಿಯಾ- 71 ಕೆಜಿ., 12:32:16- 62.5 ಕೆಜಿ.
ಈ ಮೇಲಿನ ರಸಗೊಬ್ಬರಗಳ ಸಂಯೋಜನೆಯಲ್ಲಿ ಯೂರಿಯಾ ರಸಗೊಬ್ಬರವನ್ನು ವಿಭಜಿತ ಕಂತುಗಳಲ್ಲಿ ನೀಡಲು ಸಹ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಬಹುದೆಂದು ಜಂಟಿ ಕೃಷಿ ನಿರ್ದೇಶಕರಾದ ಜಿ.ಸಿ.ಪೂರ್ಣಿಮ ತಿಳಿಸಿದ್ದಾರೆ.
