ತಾಲ್ಲೂಕು ಸುದ್ದಿ

ತಂಬಾಕು ಜಾಗೃತಿಗಾಗಿ ಅಂಗಡಿಗಳ ಮೇಲೆ ದಾಳಿ

ಸುದ್ದಿಲೈವ್. ಕಾಂ/ಭದ್ರಾವತಿ

ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಶಿವಮೊಗ್ಗ, ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಭದ್ರಾವತಿ ವತಿಯಿಂದ ಇಂದು ಭದ್ರಾವತಿಯ ಕೆಲವೆಡೆ ತಂಬಾಕು ಜಾಗೃತಿ ಮೂಡಿಸಲಾಯಿತು.

ಉಜನೀಪುರ ಹಾಗೂ ಪೇಪರ್ ಟೌನ್ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಅಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ದಙಡದ ರೂಪದಲ್ಲಿ  2100 ರೂ.ಗಳನ್ನ ಸಂಗ್ರಹಿಸಲಾಯಿತು.

ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಡಾಕ್ಟರ್ ಎಂ ವಿ ಅಶೋಕ್ ಭದ್ರಾವತಿ, ತಾಲೂಕು HIO ಶ್ರೀಯುತ ಆನಂದ ಮೂರ್ತಿ, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳು ಶ್ರೀಮತಿ ಸುಶೀಲಾಬಾಯಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಶಿವಮೊಗ್ಗದಿಂದ ಶ್ರೀಯುತ ರವಿರಾಜ್ ಪೇಪರ್ ಟೌನ್ ವ್ಯಾಪ್ತಿಯ ಪೊಲೀಸ್ ಇಲಾಖೆಯಿಂದ ಶ್ರೀಯುತ ಮಂಜುನಾಥ್ ಹಾಗೂ ನಗರ ಆರೋಗ್ಯ ಕೇಂದ್ರದಿಂದ ಶ್ರೀಯುತ ಮನೋಹರ್ ಶ್ರೀಯುತ ಚೇತನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button