ರಾಜ್ಯ

ರಾಷ್ಟಮಟ್ಟದ ಕ್ವಾಡ್ ಸ್ಕೇಟಿಂಗ್‍ನಲ್ಲಿ ಕೆವಿನ್ ಜೆ. ಹೊನ್ನಳ್ಳಿ ಪದಕ

ಸುದ್ದಿಲೈವ್. ಕಾಂ/ಶಿವಮೊಗ್ಗ

ಕೇಂದ್ರೀಯ ವಿದ್ಯಾಲಯದಲ್ಲಿ 3ನೇ ತರಗತಿ ಬಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕೆವಿನ್ ಜೆ. ಹೊನ್ನಳ್ಳಿ ಎಂಬ ಬಾಲಕ ಜೂನ್ 17 ರಿಂದ 19 ರ ವರೆಗೆ ಛತ್ತೀಸ್‍ಗಡ ರಾಜ್ಯದ ರಾಯ್‍ಪುರದಲ್ಲಿ ನಡೆದ ಕ್ವಾಡ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ರಿಂಕ್ -1 (200 ಮೀ) ರಲ್ಲಿ ಬೆಳ್ಳಿಪದಕ ಹಾಗೂ ರಿಂಕ್-3 (800ಮೀ) ರಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಈ ಪ್ರತಿಭಾವಂತ ನಗರದ ಮಂಜುಳ ಮತ್ತು ಜೋಸೆಫ್ ಆರ್. ಹೊನ್ನಳ್ಳಿಯವರ ಮಗನಾಗಿದ್ದು, ಬಾಲಕನ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಅದ್ಯಾಪಕ ವರ್ಗದವರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. (ಫೋಟೋ ಲಗತ್ತಿಸಿದೆ)

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button