ಕೋಪ ಮಾಡಿಕೊಂಡು ತವರು ಮನೆಸೇರಿದ್ದ ಪತ್ನಿಯ ಮನವೊಲಿಸಿ ಕರೆದುಕೊಂಡು ಬಂದ ಪತಿ ದಿಡೀರ್ ನಾಪತ್ತೆ!

ಸುದ್ದಿಲೈವ್. ಕಾಂ/ಆನವಟ್ಟಿ
ಬೇರೆ ಹುಡುಗಿಯ ಸಂಪರ್ಕವಿದೆ ಎಂದು ಆರೋಪಿಸಿ ತವರು ಮನೆಗೆ ಹೋಗಿದ್ದ ಪತ್ನಿಯನ್ನ ಮನವೊಲಿಸಿ ಮನೆಗೆ ಕರೆದುಕೊಂಡು ಬಂದ ಪತಿಯೇ ನಾಪತ್ತೆಯಾಗಿರುವ ಘಟನೆ ಸೊರಬ ತಾಲೂಕು ಆನವಟ್ಟಿ ಹೋಬಳಿಯ ಆಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಶಿಕಲಾ ಬಳಿಗಾರ ಎಂಬುವರು 2019 ರಲ್ಲಿ ಸಂತೋಷ್ ಜೈನ್ ರೊಂದಿಗೆ ಮದುವೆ ಆಗಿದ್ದರು, ಕಳೆದ ಒಂದು ವಾರದಿಂದ ಸಂತೋಷ್ ಬೇರೆ ಹುಡುಗಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವಿಚಾರವನ್ನು ಕೇಳಿದ್ದಕ್ಕೆ ಸಂತೋಷ ಸಾರಿ ಕೇಳಿದ್ದರು, ಈ ವಿಚಾರವಾಗಿಯೇ ಶಶಿಕಲಾ ಬೇಸರದಿಂದ ಹಾವೇರಿ ತಾಲೂಕು ಆಲದಕಟ್ಟೆಯಲ್ಲಿರುವ ತವರು ಮನಗೆ ಹೋಗಿದ್ದರು.
ಈ ವೇಳೆ ಮೊಬೈಲ್ ನಲ್ಲಿ, ತಪ್ಪಾಯ್ತು ಸಾರಿ ಎಂದು, ನನ್ನ ಮೇಲೆ ನನಗೆ ಜಿಗುಪ್ಪೆಯಾಗುತ್ತಿದೆ ಇತ್ಯಾದಿ ಆಗಿ ಮೆಸೆಜ್ ಮಾಡಿ ಸೈಟಸ್ ಹಾಕಿಕೊಂಡಿದ್ದ ಸಂತೋಷ್ ಜೈನ್ ಪೇಸ್ ಬುಕ್ ನಲ್ಲಿಯೂ ಕೂಡ ಸಾರಿ ಕೇಳಿ ಸ್ಟೇಟಸ್ ಹಾಕಿಕೊಂಡಿದ್ದರು. ಪತ್ನಿ ಶಶಿಕಲಾರ ತವರು ಮನೆಗೆ ಬಂದು ಆಲಹಳ್ಳಿಗೆ ಕರೆದುಕೊಂಡ ಹೋಗಿದ್ದನು.
ಮೊನ್ನೆ ಐದು ದಿನಗಳ ಹಿಂದೆ ಕುಬಟೂರಿಗೆ ಹೋಗಿ ಕೆಲಸ ಮಾಡಿದ ಹಣವನ್ನು ತೆಗೆದುಕೊಂಡು ಬರುವುದಾಗಿ ಹೇಳಿ ಹೋದ ಸಂತೋಷ್ ರಾತ್ರಿಯಾದರೂ ವಾಪಾಸ್ಸು ಬರಲೇ ಇಲ್ಲ. ಸಂತೋಷ್ ಮೊಬಯಲ್ ಗೆ ಕರೆ ಮಾಡಿದ ಶಶಿಕಲಾರಿಗೆ ಸಿಚ್ ಆಫ್ ಬಂದಿದೆ, ಈ ಹಿನ್ನಲೆಯಲ್ಲಿ ಕಾಣೆಯಾದ ನನ್ನ ಗಂಡನನ್ನು ಪತ್ತೆ ಮಾಡಿ ಕೊಡಿ ಎಂದು ಶಶಿಕಲಾ ಬಳಿಗಾರ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
