ತಾಲ್ಲೂಕು ಸುದ್ದಿ

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಜಿ ಸುರೇಶಯ್ಯ ಅಧಿಕಾರ ಸ್ವೀಕಾರ

ಸುದ್ದಿಲೈವ್. ಕಾಂ/ಭದ್ರಾವತಿ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿ ತಾಲೂಕು ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಈ ದಿನ ಬಸವೇಶ್ವರ ಪ್ರೌಢಶಾಲೆ ಜನ್ನಾಪುರ ಆವರಣದಲ್ಲಿ ನಡೆದಿದ್ದು ಜಿ ಸುರೇಶಯ್ಯ ಮಹಾಸಭಾದ ಭದ್ರಾವತಿ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರುದ್ರಮನಿ ಸಜ್ಜನ್ ರವರು, ನಿಕಟಪೂರ್ವ ಅಧ್ಯಕ್ಷರಾದಂತಹ ಶ್ರೀಮತಿ ನಂದಿನಿ ಮಲ್ಲಿಕಾರ್ಜುನ್ ರವರು, ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶ್ರೀಯುತ ಭುವನೇಶ್ವರ ರವರು, ತಾಲೂಕು ಘಟಕದ ಹಿರಿಯರು ಖಜಾಂಚಿ ಮೂರ್ತಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ರವಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಜನ್ನಾಪುರ ಜಗದೀಶ್ ಅವರು ಪ್ರಾಸ್ತವಿಕ ನುಡಿದರು. ವಂದನಾರ್ಪಣೆಯನ್ನು ಕೂಡ್ಲಿಗೆರೆ ರುದ್ರೇಶ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಯುವ ಘಟಕದ ಪದಾಧಿಕಾರಿಗಳು, ಸಮಾಜದ ಹಿರಿಯರು, ಹಿತೈಷಿಗಳು, ಪಾಲ್ಗೊಂಡು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು. ಅಥ್ಲೆಟಿಕ್ ಪ್ಲೇಯರ್ ಪರಮೇಶ್ವರ್ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button