ಗ್ರಾಮೀಣ ವಿದ್ಯಾರ್ಥಿಗೆ ಒಲಿದ ಅನಿಕೇತನ ಸ್ವರ್ಣ ಪದಕ

ಸುದ್ದಿಲೈವ್. ಕಾಂ/ಸಾಗರ
ಇಲ್ಲಿನ ಶಂಕರ ಘಟ್ಟದ ಜ್ಞಾನ ಸೈಹ್ಯಾದ್ರಿ ಅವರಣದಲ್ಲಿ ನೆಡೆದ 31ಹಾಗೂ 32 ನೇ ಘಟಿಕೋತ್ಸವದಲ್ಲಿ ದಾವಣಗೆರೆ ಸಮೀಪದ ಅರೆಹಳ್ಳಿಯ ಮಾಲತೇಶ್ ಅನಿಕೇತನ ಸ್ವರ್ಣ ಪದಕಕ್ಕೆ ಭಾಜನರಾಗಿದ್ದಾರೆ.
ಬಾಲ್ಯದಿಂದಲೇ ಜಾನಪದ ಗೀತೆ. ಭಾವಗೀತೆ ಹಾಗೂ ನೃತ್ಯದ ಮೂಲಕ ಆಸಕ್ತಿ ಹೊಂದಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಯುವ ಪ್ರತಿಭೆ. ತಂದೆ ಹುಚ್ಚಂಗಪ್ಪ ತಾಯಿ ನೇತ್ರಾವತಿ ಅವರ ಪುತ್ರ ಮಾಲತೇಶ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯದ ಅನಿಕೇತನ ಸ್ವರ್ಣ ಪದಕಕ್ಕೆ ಭಾಜನರಾಗಿದ್ದು ಕುಟುಂಬ ಸದಸ್ಯರು ಹಾಗೂ ಸ್ನೇಹಿತರಲ್ಲಿ ಹರ್ಷ ಇಮ್ಮಡಿಯಾಗಿದೆ.
ಅರೆಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ನಂತರ ಹೊನ್ನಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿದ ಇವರು ಶಿವಮೊಗ್ಗದ ಸೈಹ್ಯಾದ್ರಿ ಕಾಲೇಜನ ವಾಣಿಜ್ಯ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದು ಕೊಂಡಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿ. ಶಿವಮೊಗ್ಗ ಜಿಲ್ಲೆಗೆ ಹಾಗೂ ವಿಶ್ವ ವಿದ್ಯಾನಿಲಯಕ್ಕೆ ಕೀರ್ತಿ ತಂದಿದ್ದಾರೆ.
ನಿರೂಪಣೆ ಹಾಗೂ ಬಾಷಣಗಳ ಮೂಲಕ ಎಲ್ಲರ ಗಮನ ಸೆಳೆಯುವ ಇವರು ರಂಗೋಲಿ. ಮೆಹಂದಿ. ಕರಕುಶಲ ಕಲೆಯಲ್ಲಿ ತೊಡಗುವ ಮೂಲಕ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ದೆಹಲಿಯಲ್ಲಿ 2020 ರಲ್ಲಿ ನೆಡೆದ ಗಣರಾಜ್ಯೋತ್ಸವ ಪೇರೆಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಬಾಲ್ಯದಿಂದಲೂ ಓದಿನ ಜೊತೆಗೆ
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುದರ ಜೊತೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಗಂಗಾ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು ಎಂಬುದನ್ನು ಸ್ಮರಿಸಬಹುದು.
ಸದ್ಯ ಕುವೆಂಪು ವಿಶ್ವವಿದ್ಯಾಲಯದ ಅನಿಕೇತನ ಸ್ವರ್ಣ ಪದಕಕ್ಕೆ ಭಾಜನರಾಗಿರುವ ಇವರ ಸಾಧನೆಗೆ ಕುಟುಂಬ ಸದಸ್ಯರು ಸಂತಸ ವ್ಯಕ್ತಪಡಿಸಿದ್ದು ಗ್ರಾಮಸ್ಥರು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
