ಸ್ಥಳೀಯ ಸುದ್ದಿಗಳು

ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವ ಬದಲು ರೋಗಿಗಳಿಗೆ ಸೂಕ್ತ ಸಮಯದಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಮೆಗ್ಗಾನ್ ನಲ್ಲಿ ಆಗಲಿ!

ಸುದ್ದಿಲೈವ್.ಕಾಂ/ಶಿವಮೊಗ್ಗ

ಮೆಗ್ಗಾನ್ ಹೆರಿಗೆ ವಾರ್ಡ್ ನ  ಒಬಿಜಿ  ಕೊಠಡಿಯಲ್ಲಿ ನಿನ್ನೆ ಸರಿತ ಎಂಬ 27 ವರ್ಷದ ಬಾಣಂತಿ ಸಾವನ್ನಪ್ಪಿದ್ದು, ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷವಲ್ಲ ಬದಲಿಗೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಯಕೃತ್ ನಲ್ಲಿ ವೈಪಲ್ಯತೆಯಿಂದಾಗಿ ಸಾವನ್ನಪ್ಪಿರುವುದಾಗಿ ಮೆಗ್ಗಾನ್ ಮತ್ತು ಸಿಮ್ಸ್ ಆಡಳಿತ ಮಂಡಳಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದೆ.

ನಿನ್ಬೆ ಒಬಿಜಿಯಲ್ಲಿ ಸರಿತ ಎಂಬ ಬಾಣಂತಿ ಮೃತಪಟ್ಟಾಗ ಸರಿತರ‌ಕುಟುಂಬ ವೈದ್ಯರ ನಿರ್ಲಕ್ಷವೆಂದು ಆರೋಪಿಸಿ ಒಬಿಜಿಯ ಮುಖ್ಯದ್ವಾರದ ಗ್ಲಾಜುಗಳನ್ನ ಒಡೆದು ಹಾಕಿದ್ದರು. ಇದನ್ನ ಸುದ್ದಿಲೈವ್ ಸುದ್ದಿ ಮಾಡಿತ್ತು. ಕೆಲ ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಿತ್ತು.

ಆದರೆ ಎಲ್ಲಾ ದಾಖಲಾತಿಯನ್ನ ಪರಿಶೀಲಿಸಿ ನೋಡಿದಾಗ ವೈದ್ಯರ ನಿರ್ಲಕ್ಷ ಎಲ್ಲೂ ಕಂಡುಬಂದಿಲ್ಲ. ಬದಲಿಗೆ ಗರ್ಭಿಣಿ ಸರಿತ ಕಾಮಾಲೆ ಮತ್ತು ಹೈಪರ್ ಥೈರಾಯಿಡ್ ಕಾಯಿಲೆಯಿಂದ ಬಳಲುತ್ತಿದ್ದರು. ನಂತರಸಿಜರಿನ್ ಮೂಲಕ ಹೆರಿಗೆ ಮಾಡಲಾಗಿ ಗಂಡು ಮಗುವಿಗೆ ಸರಿತ ಜನ್ಮ ನೀಡಿದ್ದಾರೆ.

ಮರುದಿನ ಬಾಣಂತಿಯ ದೇಹದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಇದಕ್ಕೆ ಪೂರಕವಾಗಿ ಎಲ್ಲಾ ಚಿಕಿತ್ಸೆಯನ್ನ ನೀಡಲಾಗಿದೆ. ಆದರೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಯಕೃತ್ ನಲ್ಲಿ ವೈಫಲ್ಯತೆ ಇದ್ದಿದ್ದರಿಂದ ಚಿಕಿತ್ಸೆಗೆ ಸ್ಪಂಧಿಸದೆ ಸವಿತ ಸಾವನ್ನಪ್ಪಿದ್ದಾರೆ ಎಂದು ಮೆಗ್ಗಾನ್ ಅಧೀಕ್ಷಕ ಶ್ರೀಧರ್ ಮತ್ತು ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇವರ ಸ್ಪಷ್ಟನೆಯನ್ನ ಸ್ವಾಗತಿಸುತ್ತಲೇ ಇಂತಹ ಸಮಸ್ಯೆಗಳು ಎದುರಾದಾಗ ಮಾತ್ರ ಮಾಧ್ಯಮಗಳಿಗೆ ಮಾಹಿತಿ ಕೊಡುವ ಬದಲು ರೋಗಿಗಳ ಸಂಬಂಧಿಕರಿಗೆ ಸ್ಥಳದಲ್ಲಿಯೇ ಕಾಲಕಾಲಕ್ಕೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ ಮಾಡಿದರೆ ಒಳ್ಳೆಯದು. ಮಾಧ್ಯಮಗಳಾಗಲಿ ಡಿಜಿಟಲ್ ಮಾಧ್ಯಮಗಳಾಗಲಿ ಘಟನೆ ನಡೆದಿರುವುದನ್ನ ಜನರಿಗೆ ತಿಳಿಸುವ ಪ್ರಯತ್ನ ಮಾಡಿವೆ ವಿನಃ ವೈದ್ಯರ ನಿರ್ಲಕ್ಷವಿದೆ ಎಂದು ನೇರವಾಗಿ ಆರೋಪಿಸಿಲ್ಲ.

ಮೆಗ್ಗಾನ್ ಎಲ್ಲಾ ಭಾಗಗಳಲ್ಲಿ ಸಾರ್ವಜನಿಕರಿಗೆ ಸೂಕ್ತವಾಗಿ ಏನೇನು ಆಗ್ತಾಇವೆ ಎಂಬುದನ್ನ ವಿವರಿಸಿ ವೈದ್ಯರು ಏನೇನು ಚಿಕಿತ್ಸೆ ಕೊಟ್ಟಿದ್ದಾರೆ ಎಂಬುದರ ಮಾಹಿತಿಯನ್ನ ಸಾರ್ವಜನಿಕರಿಗೆ ತಿಳಿಸಿದರೆ ಇಂತಹ ಗಲಾಟೆಗಳು ಅರ್ಧಕ್ಕರ್ಧ ನಿಂತುಹೋಗುತ್ತದೆ. ಇಂತಹ ವ್ಯವಸ್ಥೆಯನ್ನ ಸಿಮ್ಸ್ ಮೊದಲು ಮಾಡಲಿ

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button