ನಾರಾಯಣಸ್ವಾಮಿ ಯಿಂದ ದಲಿತರ ಸ್ವಾಭಿಮಾನಕ್ಕೆ ದಕ್ಕೆ

ಸುದ್ದಿಲೈವ್. ಕಾಂ/ಶಿವಮೊಗ್ಗ
ಅಧಿಕಾರದ ಹುಚ್ಚು , ಸಂಘ ಪರಿವಾರದ ಮುಖಂಡರ ಓಲೈಕೆಗಾಗಿ ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಅವರು ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದರೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಪುರಲೆ ಆಗ್ರಹಿಸಿದ್ದಾರೆ.
ಅಧಿಕಾರಕ್ಕಾಗಿ ಆರ್ ಎಸ್ ಎಸ್ ನವರು ಬಳಿಸಿದ ಹಳೇ ಚೆಡ್ಡಿಗಳನ್ನು ತಲೆಯ ಮೇಲೆ ಹೊತ್ತು ದಲಿತರ ಸ್ವಾಭಿಮಾನಕ್ಕೆ ಛಲವಾದಿ ನಾರಾಯಣಸ್ವಾಮಿ ಧಕ್ಕೆ ತಂದಿದ್ದಾರೆ ಅದಕ್ಕೆ ತಕ್ಕ ಪ್ರತಿಫಲವನ್ನು ಅವರಿಗೆ ಸಮಾಜವೇ ನೀಡಲಿ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ಚಡ್ಡಿ ತುಂಬಾ ಗಟ್ಟಿಯಾಗಿದೆ. ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಏನು ಮಾಡಿದ್ದಾರೆ ಎಂಬುದು ನಾರಾಯಣಸ್ವಾಮಿಯವರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಬಡ್ತಿ ಮೀಸಲು, ಹತ್ತಾರು ನಿಗಮ ಮಂಡಳಿಗಳನ್ನು ರಚಿಸಿ ಮೀಸಲಾತಿಕೊಟ್ಟಿದ್ದು ಸಿದ್ದರಾಮಯ್ಯನವರು.ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
ಚಲವಾದಿ ನಾರಾಯಣಸ್ವಾಮಿಯವರು ಅಧಿಕಾರಕ್ಕಾಗಿ ಚಡ್ಡಿ ಹೊರುವ ಕೆಲಸ ಮಾಡುವುದು ಬೇಡ. ಸಮಾನತೆ ಹಕ್ಕು ಬೇಡವೆನ್ನುವವರು ಪಕ್ಷದಲ್ಲಿರುವ ದಲಿತ ನಾಯಕರು ನಮಗೆ ಬೇಡ ಎಂದು ಹೇಳಿದರು.
