ಕ್ರೈಂ
ವಿಐಎಸ್ ಎಲ್ ಕ್ವಾಟ್ರಸ್ ನಲ್ಲಿ ಚಿರತೆ ಪ್ರತ್ಯಕ್ಷ-ಓರ್ವನ ಮೇಲೆ ಅಟ್ಯಾಕ್?

ಸುದ್ದಿಲೈವ್. ಕಾಂ/ಭದ್ರಾವತಿ
ಸತ್ಯಸಾಯಿಬಾಬ ಮಂದಿರದ ವಿಐಎಸ್ಎಲ್ ಕ್ವಾಟ್ರಸ್ ಮನೆಯೊಂದರಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡಿದ್ದು ಸುತ್ತಮುತ್ತಲಿನ ಜನರಿಗೆ ಆತಂಕ ಮೂಡಿಸಿದೆ.
ನಾಯಿಯನ್ನ ಭೇಟೆಯಾಡಿಕೊಂಡು ಭದ್ರವತಿ ಪಟ್ಟಣಕ್ಕೆ ಚಿರತೆ ಎಂಟ್ರಿ ಕೊಟ್ಟಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಳಿಗ್ಗೆ 8-30 ರ ವೇಳೆಗೆ ಚಿರತೆ ಕಾಣಿಸಿಕೊಂಡಿದ್ದು ಇದುವರೆಗೂ ಅದನ್ನ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಮಾಡಪಡುತ್ತಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಅಗ್ನಿಶಾಮಕ ದಳ ಪೊಕೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮನೆಯ ಹಿಭದಿಯ ಗಿಡಗುಂಡೆಗಳಲ್ಲಿ ಚಿರತೆ ಸೇರಿಕೊಂಡಿದ್ದು ಗಾಬರಿಗೆ ಅದು ಹೊರಬರುತ್ತಿಲ್ಲ.
ಹಾಗಾಗಿ ಆಪರೇಷನ್ ಚೀತಾಕ್ಕೆ ಅಡ್ಡಿಉಂಟಾಗಿದೆ. ಇದೇ ವೇಳೆ ವ್ಯಕ್ತಿಯೋರ್ವನ ಮೇಲೆ ಚಿರತೆ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. ಅರಣ್ಯ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
