ಮನೆಗಳ್ಳತನ-4,98,500 ರೂ ಮೌಲ್ಯದ ಚಿನ್ನಾಭರಣ,ನಗದು ಹಾಗೂ ಬೆಳ್ಳಿ ಕಳುವು
ಸುದ್ದಿಲೈವ್. ಕಾಂ/ತೀರ್ಥಹಳ್ಳಿ
ತೀರ್ಥಹಳ್ಳಿ ತಾಲೂಕು ಬುಕ್ಲಾಪುರ ಗ್ರಾಮದ ಹೊರಬೈಲಿನ ಬಸ್ತಿ ಶಂಕರೇಶ್ವರ ದೇವಸ್ಥಾನದ ಮನೆಯೊಂದರಲ್ಲಿ ಕಳ್ಳತನವಾಗಿದ್ದು ಬರೊಬ್ಬರಿ 4,98,500 ರೂ. ರೂ ನಗದು,ಬೆಳ್ಳಿ, ಮತ್ತು ಬಂಗಾರದ ಆಭರಣಗಳು ಕಳುವಾಗಿದೆ.
ಶಿಲ್ಪ ಶಿವಕುಮಾರ್ ಮತ್ತು ಸಹೋದರಿ ಶೃತಿ ಸದಾಶಿವ ತಂಗಡೆ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದು ಇಬ್ವರು ದೇವರ ಪೂಜೆಗೆಂದು ಊರಿಗೆ ತೆರಳಿದ್ದು ನಂತರ ಚಿಕ್ಕಪ್ಪನವರ ನಿಧನದ ವಾರ್ತೆ ತಿಳಿದು ಚಿಕ್ಕಪ್ಪನ ಮನೆಗೆ ಹೋಗಿರುತ್ತಾರೆ.
ಜೂ.15 ರಿಂದ ಜೂ.18 ರವರೆಗೆ ಮನೆಗೆ ಬೀಗ ಹಾಕಿದ್ದು ಮನೆಯ ಬೀಗ ಒಡೆದು ಮನೆಯ ಬೀರುವಿನಲ್ಲಿದ್ದ 14 ಗ್ರಾಂನ ಒಂದು ಬಳೆ, 11 ಗ್ರಾಂನ ಒಂದು ಸರ 14 ಗ್ರಾಂನ ಒಂದು ಜೊತೆ ಜುಮುಕಿ, ಎರಡು ಬೆಳ್ಳಿ ಬಳೆ ಅಂದಾಜು 2000 ರೂ ಹಾಗೂ 30,000 ನಗದು
ಮತ್ತು ಶೃತಿ ಅವರಿಗೆ ಸೇರಿದ 26 ಗ್ರಾಂ ನ ಬಂಗಾರದ ಮಾಂಗಲ್ಯದ ಸರ, 08 ಗ್ರಾಂನ ಬಂಗಾರದ ಸರ, 13 ಗ್ರಾಂನ 03 ಉಂಗುರಗಳು, 1 ಬೆಳ್ಳಿ ಸರ, ಬೆಳ್ಳಿ ಬಳೆ 01 ಜೊತೆ, ಸೊಂಟದ ನವಳ 01, 05 ಗ್ರಾಂನ ಬಂಗಾರದ ಓಲೆ ಹಾಗೂ ನಗದು ಹಣ 12,000 ರೂ ಕಳುವಾಗಿದೆ.
ಒಟ್ಟು 4,98,500 ರೂ. ಚಿನ್ನಾಭರಣ,ನಗದು,ಬೆಳ್ಳಿ ವಸ್ತುಗಳು ಕಳುವಾಗಿದೆ ಎಂದು ಶಿಲ್ಪ ಶಿವಕುಮಾರ್ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
