ಸ್ಥಳೀಯ ಸುದ್ದಿಗಳು

ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಚರ್ಚೆಗೆ ಕಾರಣವಾಯಿತು ಗೃಹಸಚಿವರ ಯೋಗ ಭಂಗಿ

ಸುದ್ದಿಲೈವ್. ಕಾಂ/ಶಿವಮೊಗ್ಗ

ಗೃಹ ಸಚಿವ ಆರಗ ಜ್ಞಾನೇಂದ್ರರವರ ಯೋಗ ಭಂಗಿಯ ಫೊಟೊ ಒಂದು ಸಾಮಾಜಿ‌ಕ ಜಾಲತಾಣಗಳಾದ ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಸಕ್ಕತ್ ವೈರಲ್ ಆಗ್ತಾ ಇದೆ.

ಈ ರೀತಿಯ ಭಂಗಿಗೆ ನೆಟ್ಟಿಗರು ಆಕ್ಷೇಪಣೆ ಎತ್ತಿದ್ದು ರಾಜ್ಯಕ್ಕೆ ಪ್ರಧಾನಿ ಮೋದಿ ಬಂದು ಬೆಳಿಗ್ಗೆ ಮೈಸೂರಿನ ದಸರಾ‌ಮೈದಾನದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಹೋದರು ಗೃಹ ಸಚಿವರು ಬೆಂಗಳೂರು ಮನೆಯಲ್ಲಿಯೇ ಯೋಗ ಮಾಡಿರುವ ಬಗ್ಗೆ ನೆಟ್ಟಿಗರು ಸಕ್ಕತ್ ಚರ್ಚೆ ಮಾಡಿದ್ದಾರೆ.

ಗೃಹ ಸಚಿವರ ಈ ಫೋಟೊಗೆ ತೀರ್ಥಹಳ್ಳಿ ಜನ ಸಕ್ಕತ್ ಆಕ್ಷೇಪಿಸಿದ್ದಾರೆ. ಪ್ರಧಾನಿ ಮೋದಿ ಬಂದರೆ ಗೃಹಸಚಿವರಿಗೆ ಬೆಂಗಳೂರಿನಲ್ಲಿ ಏಕೆವಿದ್ದಾರೆ ಎಂದು ಆಕ್ಷೇಪಿಸಿದರೆ, ಇನ್ನು ಕೆಲವರು ಗೃಹಸಚಿವರು ಮನೇಲಿ ಇರುವುದು ನನಗಂತೂ ಬೇಸರ ತಂದಿದೆ ಎಂದಿದ್ದಾರೆ.

ನೀವು ಮೋದಿಜಿಯವರ ಜೊತೆಗೆ ಯೋಗ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಅಲ್ಲವೇ ಎಂದು ಸೂರ್ಯನಾರಾಯಣ ಹೊಳ್ಳ ಫೇಸ್ ಬುಕ್ ನಲ್ಲಿ ಆಕ್ಷೇಪಿಸಿದರೆ, ಅಮೀರ್ ಹುಸೇನ್ ಎಂಬುವರು ಪ್ರದಾನಿಯವರು ಬಂದಿರುವಾಗ ಗೃಹಸಚಿವರಾಗಿ‌ ನೀವು ಮೈಸೂರಿನಲ್ಲಿ ಅವರ ಜೊತೆ ಇರಬೇಕಿತ್ತಲ್ವಾ ಸರ್ ಎಂದು ಪ್ರಶ್ನಿಸಿದ್ದಾರೆ.

ಹೀಗೆ ಕೆಲವರು ಪ್ರಧಾನಿ ಮೋದಿಯನ್ನ ವೆಲ್ ಕಮ್ ಮಾಡಿರುವ ಫೊಟೊಗಳನ್ಬೂ ಸಹ ಹಾಕಿ ಟಾಂಗ್ ನೀಡಿದ್ದಾರೆ. ಫೇಸ್ ಬುಕ್ ನಲ್ಲಿ ಈ ಫೋಟೊವನ್ನ ಶೇರ್ ಸಹ ಮಾಡಲಾಗಿದೆ. ಒಟ್ಟಿನಲ್ಲಿ ಗೃಹಸಚಿವರ ಯೋಗ ಭಂಗಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button