ತಾಲ್ಲೂಕು ಸುದ್ದಿ
ಎಲ್ಲಾ ಗೋಮಾಂಸ ಮಾರಾಟ ಕೇಂದ್ರಗಳು ಅಕ್ರಮ-ತೆರವುಗೊಳಿಸುವಂತೆ ಹಿಂದೂ ಜಾಗರಣ ವೇದಿಕೆ ಮನವಿ

ಸುದ್ದಿಲೈವ್.ಕಾಂ/ಭದ್ರಾವತಿ
ಭದ್ರಾವತಿಯಲ್ಲಿ ಗೋಮಾಂಸಗಳ ಮಾರಾಟ ಕೇಂದ್ರಗಳು ಹೆಚ್ಚಾಗಿದ್ದು, ಯಾವುದೇ ಮಾರಾಟ ಕೇಂದ್ರಗಳು ಪರವಾನಗಿ ಪಡೆಯದೆ ಅಕ್ರಮ ಮಾರಾಟ ಕೇಂದ್ರವಾಗಿರುವುದರಿಂದ ಅವುಗಳನ್ನ ಶೀಘ್ರದಲ್ಲಿಯೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಇಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಭದ್ರಾವತಿ ನಗರ ಸಭೆಗೆ ಮನವಿ ಸಲ್ಲಿಸಿದೆ.
ಭದ್ರಾವತಿಯಲ್ಲಿ ಗೋಮಾಂಸ ಮಾರಾಟ ಮಳಿಗೆ ಕೇಂದ್ರಗಳಿಗೆ ನಗರ ಸಭೆ ಪರವಾನಗೆ ನೀಡಿದೆಯಾ ಎಂಬ ಮಾಹಿತಿ ಕೋರಿ ಆರ್ ಟಿ ಐ ಸಲ್ಲಿಸಿರುವ ವೇದಿಕೆಗೆ ಯಾವ ಗೋಮಾಂಸ ಕೇಂದ್ರಗಳಿಗೆ ನಗರ ಸಭೆ ಪರವಾನಗಿ ನೀಡಿಲ್ಲವೆಂದು ಮಾಹಿತಿ ನೀಡಿದೆ.
ಈ ಹಿನ್ನಲೆಯಲ್ಲಿ ವೇದಿಕೆ ಮೂವರು ಅಧಿಕಾರಿಗಳಿಗೆ ಮನವಿ ನೀಡಿ ಗೋಂಸಗಳನ್ನ ಅಕ್ರಮವಾಗಿ ನಡೆಸುತ್ತಿದ್ದು ಎಲ್ಲಾ ಅಕ್ರಮ ಗೋಮಾಂಸ ಮಾರಾಟ ಕೇಂದ್ರಗಳನ್ನ ತೆರವುಗೊಳಿಸಬೇಕು, ಅಕ್ರಮವಾಗಿ ನಡೆಸುವ ವ್ಯಕ್ತಿಗಳಿಗೆ ಮತ್ತು ಅಕ್ರಮ ಮಾರಾಟ ಕಟ್ಟಡಗಳ ವಿರುದ್ಧವೂ ಕಾನೂನು ರೀತಿ ಕ್ರಮ ಕೈಗೊಳ್ಳಲು ಮನವಿಯಲ್ಲಿ ಒತ್ತಾಯಿಸಿದೆ.
