ಸಾರ್ವಜನಿಕ ಸ್ಥಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಡಿದಾಟ-7 ಜನರ ಬಂಧನ

ಸುದ್ದಿಲೈವ್. ಕಾಂ/ಶಿವಮೊಗ್ಗ
ಸಾರ್ವಜನಿಕ ಸ್ಥಳಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಬೈದಾಡಿಕೊಳ್ಳುತ್ತಾ ಹಾಗೂ ಬಡಿದಾಡಿಕೊಳ್ಳುತ್ತಿದ್ದ 7 ಜನರನ್ನ ತುಂಗ ನಗರ ಪೊಲೀಸರು ಬಂಧಿಸಿದ್ದಾರೆ.ಪೊಲೀಸರನ್ನ ಕಂಡು ನಾಲ್ವರು ಸ್ಥಳದಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ವಿನಾಯಕ ವೃತ್ತದ ಬಳಿ 10 ರಿಂದ 11 ಜನ ಸಾರ್ವಜನಿಕರ ನೆಮ್ಮದಿಗೆ ಭಂಗ ಬರುವಂತೆ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ತುಂಗನಗರ ಪೊಲೀಸರಿಗೆ ಕರೆ ಬಂದ ಹಿನ್ನಲೆಯಲ್ಲಿ ಪೊಲೀಸರು ಸ್ಥಳಕ್ಕೆ ದಾವಿಸಿದ್ದಾರೆ. ಪೊಲೀಸರನ್ನ ಕಂಡು ನಾಲ್ವರು ಒರಾರಿಯಾಗಿದ್ದಾರೆ. 7. ಜನರನ್ನಬಂಧಿಸಿ 11 ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಪುರುದಾಳಿನ ಹನುಮಂತಪುರದ 1]ಕಾರ್ತೀಕ ತಂದೆ ಮಂಜುನಾಥ್ (25) 2] ಅಣ್ಣಾನಗರ 5 ನೇ ತಿರುವಿನ ಕಿರಣ್ ಹೆಚ್ ತಂದೆ ಹಾಲೇಶಪ್ಪ (21) 3] ವಿದ್ಯಾನಗರ 5 ನೇ ಕ್ರಾಸ್ ನ ನಿವಾಸಿ ನೀತಿನ್ ಕುಮಾರ್ ತಂದೆ ವಿಜಯ್ (27), 4] ಟಿಪ್ಪುನಗರ 7 ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ ಎಡಭಾಗದ ನಿವಾಸಿ ಸೈಯದ್ ಮುಜಾಮಿಲ್ @ ಮುಜ್ಜು ತಂದೆ ಸೈಯದ್ ರಫೀದ್ (19) 5] ತುಂಗಾನಗರ 5 ಅಡ್ಡ ರಸ್ತೆಯ ನಿವಾಸಿ ಜಾಫರ್ ಸಾಧೀಕ್ @ಟಿನ್ನರ್ ತಂದೆ ಆತಾವುಲಾ (23) 6] ಟಿಪ್ಪುನಗರ ಎಡಭಾಗ ಶಾದಿ ಮಹಲ್ 7 ನೇ ಕ್ರಾಸ್ ನ ನಿವಾಸಿ ಇಮ್ರಾನ್ @ ಇಮ್ಮು @ ಬಾವ ತಂದೆ ಅಮಾನುಲಾ (19) ಎಂಬುವರನ್ನ ಬಂಧಿಸಲಾಗಿದೆ.
ನಂತರ ಓಡಿ ಹೋದ ಆಸಾಮಿಗಳ ಬಗ್ಗೆ ವಿಚಾರ ಮಾಡಲಾಗಿ ಓಡಿ ಹೋದವರು 7] ನೂರೂಲಾ @ ನೂರು @ 8] ಅಲ್ತಾಫ್, 9] ತೋಹಿದ್ 10) ಚಪಾತಿ @ ಪೈರೋಜ್ 11]ಆನಂದ್ ಎಂದು ತಿಳಿದು ಬಂದಿದೆ.
ನಂತರ ಇವರುಗಳ ಬಳಿ ಏಕೇ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಮಾಡುತ್ತಿರುತ್ತೀರಿ ಎಂದು ಪೊಲೀಸರು ವಿಚಾರ ಮಾಡಿದಾಗ ನಮ್ಮಗಳಿಗೆ ಹಾಗೇ ಮಾತಿಗೆ ಮಾತು ಬೆಳೆದು ಹಾಗೇ ಹೊಡೆದಾಟ ಮಾಡಿಕೊಳ್ಳುತ್ತಿದ್ದೇವು ಎಂದು ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ, ಸಾರ್ವಜನಿಕರ ನೆಮ್ಮದಿಗೆ ಭಂಗ ಬರುವಂತೆ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡುತ್ತಿದ್ದ 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
