
ಸುದ್ದಿಲೈವ್. ಕಾಂ/ಶಿವಮೊಗ್ಗ
ಬೆಳಿಗ್ಗೆ ಪೊಲೀಸರ ಎದೆಗೆ ಚಾಕುವಿನಿಂದ ಇರಿದು ಎಂಕೆಕೆ ರಸ್ತೆಯಿಂದ ಪರಾರಿಯಾಗಿದ್ದ ಆರೋಪಿಯನ್ನ ರಾಜೀವ್ ಗಾಂಧಿ ಬಡಾವಣೆಯಲ್ಲಿ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯ ಕ್ರೈಂ ಪೊಲೀಸರಾದ ಗುರು ನಾಯ್ಕ್ ಮತ್ತು ರಮೇಶ್ ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಶಾಹೀದ್ ಕುರೇಶಿಯನ್ನ ಮಧ್ಯಹ್ನದ ವೇಳೆ ಹೆಡೆಮುರಿ ಕಟ್ಟಲಾಗಿದೆ.
ರಾಜೀವ್ ಗಾಂಧಿ ಬಡಾವಣೆಯಲ್ಲಿ ಬಂಧನದ ವೇಳೆಯೂ ಪೊಲೀಸರ ಮೇಲೆ ಲಾಂಗಿನಿಂದ ಬೀಸಿ ಆರೋಪಿ ಮತ್ತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಪೊಲೀಸರು ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡೇಟು ಹಾರಿಸಿ ಸೆರೆಹಿಡಿದಿದ್ದಾರೆ. ಆರೋಪಿಯನ್ನ ಮೆಗ್ಗಾನ್ ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ದೊಡ್ಡಪೇಟೆ ಪೊಲೀಸರಿಂದ ತಪ್ಪಿಸಿಕೊಂಡು ನಾಲ್ಕು ಗಂಟೆಯ ಅವಧಿಯಲ್ಲಿ ಆರೋಪಿಯನ್ನ ಕೋಟೆ ಪೊಲೀಸರು ಬಂಧಿಸಿದ್ದಾರೆ. ರಾಜೀವ್ ಗಾಂಧಿ ಬಡಾವಣೆಯ ರಸ್ತೆಯಲ್ಲಿಯೇ ನಿಂತಿದ್ದಾಗ ಕೋಟೆ ಪೊಲೀಸ್ ಪಿಐ ಚಂದ್ರಶೇಖರ್ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.
