ಮನೋರಂಜನೆ

ಕೋಟೆ ರಂಗಮಂದಿರದಲ್ಲಿ ನಡೆಯುತ್ತಿದೆ ಕಲಾವಿದರಿಗಾಗಿ ಹುಡುಕಾಟ

ಸುದ್ದಿಲೈವ್. ಕಾಂ/ಶಿವಮೊಗ್ಗ

ಚಿತ್ರನಟ, ನಿರ್ದೇಶಕ ರಿಷಿಬ್ ಶೆಟ್ಟಿ ಪ್ರೊಡೆಕ್ಷನ್‌ನಲ್ಲಿ ತಯಾರಾಗುವ ನೂತನ ಚಲನಚಿತ್ರಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆ ಶಿವಮೊಗ್ಗ ಕೋಟೆ ಬಡಾವಣೆಯಲ್ಲಿ ಭರ್ಜರಿಯಾಗಿ ಸಾಗಿದೆ.

ಇಂದು ಬೆಳಿಗ್ಗೆ 10-30 ರಿಂದ ಆಡಿಷನ್ ಆರಂಭಗೊಂಡಿದ್ದು ಮಧ್ಯಾಹ್ನದ 2 ಗಂಟೆಯ ವರೆಗೆ 205 ಜನರು ಆಡಿಷನ್ ಗಾಗಿ ತಮ್ಮ ಹೆಸರು ನೋಂದಾಯಿಸಿದ್ದಾರೆ. ಈ ಸಂಖ್ಯೆ 300 ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.‌ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಪಕ್ಕದ ಕೋಟೆ ಬಯಲು ರಂಗಮಂದಿರದಲ್ಲಿ ಆಡಿಷನ್ ಸಂಜೆ 4-30 ರವರೆಗೆ ನಡೆಯಲಿದೆ.

5 ರಿಂದ 10 ವರ್ಷದೊಳಗಿನ ಬಾಲ ಕಲಾವಿದರು, 20ರಿಂದ 30, 50 ರಿಂದ 65 ವರ್ಷದ ಪುರುಷರು ಪೋಷಕ ಪಾತ್ರಕ್ಕೆ ಹಾಗೂ 20 ರಿಂದ 35 ವರ್ಷದ ವಯಸ್ಸಿನ ಮಹಿಳೆಯರು ಪೋಷಕ ಪಾತ್ರಕ್ಕಾಗಿ ಜನ ಆಡಿಷನ್ ನೀಡಿದ್ದಾರೆ.

ಈ ಆಡಿಷನ್‌ಗೆ ಕಲಾವಿದರು ಯಾವುದೇ ವಿಶೇಷ ಪೋಷಾಕು ಹಾಗೂ ಮೇಕಪ್ ರಹಿತವಾಗಿ ಆಗಮಿಸಿದ್ದು ವಿಶೇಷವಾಗಿತ್ತು, ಪ್ರಮೋದ್ ಶೆಟ್ಟಿ ಈ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿಯೇ ಸಿನಿಮಾ ಶೂಟಿಂಗ್ ನಡೆಯಲಿದೆ.

ಸಿನಿಮಾಕ್ಕೆ ನಾಯಕ, ನಾಯಕಿ, ವಿಲನ್ ಹೊರತು ಪಡಿಸಿ 45 ಜನ ಪೋಷಕ ಪಾತ್ರಕ್ಕೆ ಬೇಕಾಗಿದ್ದಾರೆ. ಸಿನಿಮಾ ಶಿವಮೊಗ್ಗ ಮತ್ತು ಸುತ್ತಮುತ್ತಲಿನಲ್ಲಿ ನಡೆಯುತ್ತಿರುವುದರಿಂದ ಸ್ಥಳೀಯರೇ ಸಿನಿಮಾದ ಪಾತ್ರಗಳಿಗೆ ಬೇಕಾಗಿದ್ದು ಹಾಗಾಗಿ ಆಡಿಷನ್ ನನ್ನೂ ಕೂಡ ಶಿವಮೊಗ್ಗದಲ್ಲಿ ನಡೆಸಲಾಗುತ್ತಿದೆ ಎಂದು ಚಿತ್ರದ ಆಡಿಷನ್ ತಂಡ ತಿಳಿಸಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button