ಸ್ಥಳೀಯ ಸುದ್ದಿಗಳು
ಯೋಗ ದಿನಾಚರಣೆಗೆ ಮಾಜಿ ಸಚಿವ ಈಶ್ವರಪ್ಪ ಮತ್ತು ವಿನಯ್ ಗುರೂಜಿ ಚಾಲನೆ
ಸುದ್ದಿಲೈವ್.ಕಾಂ/ಶಿವಮೊಗ್ಗ
ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲು ಜಿಲ್ಲಾಡಳಿತದ ವತಿಯಿಂದ ಯೋಗ ದಿನ ಆಚರಣೆಯನ್ನ ಆಚರಿಸಲಾಯಿತು.
ನಗರದ ನೆಹರು ಕ್ರೀಡಾಂಗಣದಲ್ಲಿ ಯೋಗದಿನ ಆಚರಣೆಯನ್ನ ಹಮ್ಮಿಕೊಳ್ಳಲಾಗಿದ್ದು,ಯೋಗ ದಿನಾಚರಣೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅವಧೂತ ವಿನಯ್ ಗುರೂಜಿ ಚಾಲನೆ ನೀಡಿದರು.
ಯೋಗ ದಿನ ಆಚರಣೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಎಂಎಲ್ಸಿ ರುದ್ರೇಗೌಡ ಭಾಗಿಯಾಗಿದ್ದಾರೆ.
ಯೋಗ ದಿನ ಆಚರಣೆಯಲ್ಲಿ ಭಾಗವಹಿಸಿ ಹಲವು ಆಸನಗಳನ್ನ ನೂರಾರು ಯೋಗಪಟುಗಳು ಅಭ್ಯಾಸ ಮಾಡಿದ್ದಾರೆ. ಅದರಂತೆ ಶಿವಮೊಗ್ಗದ ಐಬಿ ಎದುರಿನ ಆಯುರ್ವೇದ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನ ಆಚರಿಸಲಾಯಿತು.
