ಕ್ರೈಂ

ಮೆಗ್ಗಾನ್ ನಲ್ಲಿ ಬಾಣಂತಿ ಸಾವು-ಗ್ಲಾಜುಗಳು ಪೀಸ್ ಪೀಸ್..!

IMG_20220621_112210ಸುದ್ದಿಲೈವ್. ಕಾಂ/ಶಿವಮೊಗ್ಗ

ನಾಲ್ಕು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಇಂದು ಬೆಳಿಗ್ಗೆ ದಿಡೀರ್ ಎಂದು ಸಾವನ್ನಪ್ಪಿದ್ದು, ಮೆಗ್ಗಾನ್ ಹೆರಿಗೆ ವಾರ್ಡ್ ನ ಒಬಿಜಿ ವಿಭಾಗದಲ್ಲಿ ಸಾವನ್ನಪ್ಪಿದ್ದ ಬಾಣಂತಿಯ ಕುಟುಂಬಸ್ಥರಿಂದ ಗ್ಲಾಸ್ ಗಳನ್ನ ಒಡೆದು ಹಾಕಿರುವ ಘಟನೆ ನಡೆದಿದೆ.

ವೈದ್ಯರ ನಿರ್ಲಕ್ಷದ ಹಿನ್ನಲೆಯಲ್ಲಿ ಬಾಣಂತಿಯ ಸಾವಾಗಿದೆ ಎಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶಗೊಂಡು ಒಬಿಜಿ ಬಾಗಿಲಿನ ಗ್ಲಾಜುಗಳನ್ನ ಪುಡಿ ಮಾಡಿದ್ದಾರೆ. ಹೆರಿಗೆಯಾಗಿ ಚೆನ್ನಾಗಿಯೇ ಇದ್ದ ಮಹಿಳೆ ಇಂದು ಬೆಳಿಗ್ಗೆ 5 ಗಂಟೆಗೆ ಅಸುನೀಗಿರುವುದು ವೈದ್ಯರನಿರ್ಲಕ್ಷವೇ ಕಾರಣವೆಂದು ಕುಟುಂಬ ಆರೋಪಿಸಿದೆ.

ಶುಕ್ರವಾರ ಮೆಗ್ಗಾನ್ ಹೆರಿಗೆ ವಾರ್ಡ್ ಗೆ ಬಂದು ದಾಖಲಾದ ಸರಿತಾ(27) ರಿಗೆ ಜೂ.18 ರಂದು ಸಿಜರಿನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಗಂಡು ಮಗುವಿಗೆ ಸರಿತಾ ಜನ್ಮ ನೀಡಿದ್ದಾರೆ. ಒಂದು ದಿನ ಆರಾಮಾಗೆ ಇದ್ದ ಸರಿತಾರವರಿಗೆ ಭಾನುವಾರ ಸುಸ್ತು ಕಾಣಿಸಿಕೊಂಡಿದೆ.

ಬಾಣಂತಿಗೆ ದಿಡೀರನೇ ಸುಸ್ತುಕಾಣಿಸಿಕೊಂಡಿರುವ ಬಗ್ಗೆ ಮೆಗ್ಗಾನ್ ನಲ್ಲಿ ಹಲವು ತಪಾಸಣೆ ನಡೆಸಲಾಗಿದೆ. ಸೋಮವಾರ ದಿಡೀರನೇ ಎರಡು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೆ ಯಾವುದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಎಂದು ಕುಟಿಂಬಕ್ಕೆ ವೈದ್ಯರು ತಿಳಿಸಿಲ್ಲವೆಂದು ಕುಟುಂಬ ಆರೋಪಿಸಿದೆ.

ಈ ಮಧ್ಯೆ ಕುಟುಂಬ ಮೆಗ್ಗಾನ್ ನಲ್ಲಿ ಸಾಧ್ಯವಾಗದಿದ್ದರೆ ತಿಳಿಸಿ ನಾವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದೆ. ಆದರೆ ಮೆಗ್ಗಾನ್ ವೈದ್ಯರು ಬಾಣಂತಿಗೆ ಇಲ್ಲೇ ಚಿಕಿತ್ಸೆ ನೀಡುತ್ತೇವೆ. ಶೀಘ್ರದಲ್ಲಿಯೇ ಸರಿತಾ ಸರಿ ಹೋಗುತ್ತಾರೆ ಎಂದು ಭರವಸೆ ನೀಡಿರುವುದಾಗಿ ಕುಟುಂಬ ತಿಳಿಸಿದೆ.

ಕೆಲ ಪತ್ರಕರ್ತರು ವೈದ್ಯರಲ್ಲಿ ಸರಿತಾರ ಆರೋಗ್ಯದ ಬಗ್ಗೆ ಚರ್ಚಿಸಿ ಮೆಗ್ಗಾನ್ ನಲ್ಲಿ ಸಾಧ್ಯವಾಗದಿದ್ದರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಇಷ್ಟೆಲ್ಲಾ ಆದರೂ ವೈದ್ಯರು ಮೆಗ್ಗಾನ್ ನಲ್ಲಿ ಅವರ ಆರೋಗ್ಯ ಕಾಪಾಡುವುದಾಗಿ ತಿಳಿಸಿರುವುದಾಗಿ ಕುಟುಂಬ ಮಾಹಿತಿ ನೀಡಿದೆ.

ಇದರಿಂದ ಸುಮ್ಮನಾಗಿದ್ದ ಸರಿತಾರ ಕುಟುಂಬ ಇಂದು ಬೆಳಿಗ್ಗೆ ಅಕೆಯ ಸಾವನ್ನಪ್ಪಿರುವುದನ್ನ ಕಂಡು ಕೆಂಡಮಂಡಲಗೊಂಡಿದೆ. ವೈದ್ಯರ ನಿರ್ಲಕ್ಷತನ ಮತ್ತು ಬೇಜವಬ್ದಾರಿತನದಿಂದ ಸರಿತಾ ಸಾವನ್ನಪಿರುವುದಾಗಿ ಆರೋಪಿಸಿ ಬಾಗಿಲುಗಳ ಗ್ಲಾಜುಗಳನ್ನ ಒಡೆದು ಹಾಕಿದ್ದಾರೆ. ಬಾಣಂತಿ ಸಾವಿಗೆ ಜಾಂಡೀಸ್ ಕಾರಣ ಎಂದು ಹೇಳಲಾಗುತ್ತಿದೆ.

IMG-20220621-WA0001

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button