ಶಿಕ್ಷಣ

ಯೋಗಾ ದಿನಾಚರಣೆ ಅಂಗವಾಗಿ ಕಾಸ್ಮೋಕ್ಲಬ್ ನಲ್ಲಿ ಜಲಯೋಗ

ಸುದ್ದಿಲೈವ್.ಕಾಂ/ಶಿವಮೊಗ್ಗ

ಅಂತರಾಷ್ಟ್ರೀಯ ಯೋಗಾ ದಿನಾಚರಣೆಯ ಅಂಗವಾಗಿ ಇಂದು ನಗರದ ಕಾಸ್ಮೋ ಕ್ಲಬ್ ನಲ್ಲಿ ಸ್ವಿಮ್ಮಿಂಗ್ ಫೂಲ್ ನಲ್ಲಿ ಜಲಯೋಗ ಮಾಡುವ ಮೂಲಕ ಯೋಗಾ ದಿನಾಚರಣೆ ನಡೆಸಲಾಯಿತು.

ನೀರಿನಲ್ಲಿ ತೇಲುತ್ತಾ, ಸ್ಥಿತಿಯನ್ನ ಕಾಣುತ್ತಾ ಯೋಗವನ್ನ ಮಾಡುವುದೇ ಜಲಯೋಗವಾಗಿದೆ. ಕೃಷಿ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಹೆಚ್ ಒಡಿ ಶಶಿಧರ್ ಕುಂಬಾರ್ ಜಲಯೋಗವನ್ನ 9 ಜನರೊಂದಿಗೆ ಆಸನವನ್ನ ಪ್ರದರ್ಶಿಸಿದರು.

ತಾಡಾಸನ, ಮತ್ಸಾತ್ಸಾನ, ನಾವಾಸನ, ಪದ್ಮಾಸನ, ಬದ್ದಕೋನಾಸನ, ಮಕರಾಸನ,ಜಲಸ್ಥಂಭನ ಆಸನಗಳನ್ನ ಮಾಡಿದರು.

ನಂತರ ಮಾಧ್ಯಮಗಳಿಗೆ ಮಾತನಾಡಿದ ಯೋಗಾಪಟು  ಶಶಿಧರ್ ಕುಂಬಾರ ಇಂದು 30 ಆಸನಗಳನ್ನ ಪ್ರದರ್ಶಿಸಿದ್ದೇವೆ. ನೆಲದಲ್ಲಿ ಮಾಡುವ ಆಸನಗಳಲ್ಲಿ ಜಲಯೋಗದ ಭಂಗಿ ಇದೆ. ಮತ್ಸಾಸನ ಮೊದಲಾದ ಆಸನಗಳು ಜಲಯೋಗದಲ್ಲಿ ಬರುತ್ತವೆ. ನೆಲೆದ ಯೋಗಕ್ಕೆ ನಿಯಮಗಳಿವೆ. ಮುಂದಿನ ದಿನಗಳಲ್ಲಿ ಜಲಯೋಗಕ್ಕೂ ನಿಯಮಗಳು ರೂಪಿಸುವಂತಾಗಲಿ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button