ತಾಲ್ಲೂಕು ಸುದ್ದಿ

ಕರ್ತವ್ಯ ನಿರ್ಲಕ್ಷದ ಹಿನ್ನಲೆ ಗ್ರಾಮ ಲೆಕ್ಕಾಧಿಕಾರಿಗೆ ನೋಟೀಸ್ ಜಾರಿ

ಸುದ್ದಿಲೈವ್.ಕಾಂ/ಹೊಸನಗರ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ನಾಗೋಡಿ ವೃತ್ತದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕರ್ತವ್ಯ ನಿರ್ಲಕ್ಷದ ಹಿನ್ಬಲೆಯಲ್ಲಿ ತಹಶೀಲ್ದಾರ್ ರಾಜೀವ್ ನೋಟೀಸ್ ನೀಡಿದ್ದಾರೆ.

ಪಿಂಚಣಿ ಮಾಡಿಸಲು ಹೆಬ್ಬಿ ಗ್ರಾಮದಿಂದ ಬಂದಿದ್ದ ಸಾಕಮ್ನ ಎಂಬುವರು ನಿಟ್ಟೂರು ಗ್ರಾಮದಿಂದ ಕಾಲ್ನೆಡಿಗೆಯಲ್ಲಿ ಬಂದು ಮಧ್ಯಾಹ್ನ 1 ಗಂಟೆಯ ವರೆಗೂ ಕಚೇರಿಗೆ ತೆರಳದ ಗ್ರಾಮ ಲೆಕ್ಕಾಧಿಕಾರಿ ಡಿ.ಪಿ ಮಂಜಪ್ಪ ನಿರ್ಲಕ್ಷ ತೋರಿದ್ದರು.  ಅಲ್ಲದೆ  ವೃದ್ಧೆ ಅಸ್ವಸ್ಥಳಾಗಿ ಕುಸಿದು ಬಿದ್ದಿದ್ದಳು.

ಈ ಬಗ್ಗೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿ ಗ್ರಾಮಪಂಚಾಯಿತಿಯಲ್ಲಿ ದೂರು ಸಲ್ಲಿಸಿದ್ದಾರೆ. ಈ ವಿಷಯ ಮಾಧ್ಯದದಲ್ಲೂ ಪ್ರಕಾಟವಾದ ಹಿನ್ನಲೆಯಲ್ಲಿ ತಹಶೀಲ್ದಾರ್ ರಾಜೀವ್ ನೋಟೀಸ್ ನೀಡಿದ್ದಾರೆ.

ಈ ರೀತಿಯಾಗಿ ನೀವು ನಿಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿ ಮತ್ತು ಅಸಡ್ಡೆಯನ್ನು ತೋರಿಸುತ್ತಿರುವುದು ಮೇಲ್ನೋಟಕ್ಕೆ ಮಂಜಪ್ಪನವರ ಕರ್ತವ್ಯ ನಿರ್ಲಕ್ಷ್ಯತೆಯನ್ನು ತೋರುತ್ತಿದ್ದು, ನಿಮ್ಮ ಮೇಲೆ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಏಕೆ ಶಿಫಾರಸ್ಸು ಮಾಡಬಾರದು ಎಂಬ ಬಗ್ಗೆ ಈ ತಿಳುವಳಿಕೆ ತಲುಪಿದ 24 ಗಂಟೆಯೊಳಗಾಗಿ ನಿಮ್ಮ ಲಿಖಿತ ಸಮಜಾಯಿಷಿಯನ್ನು ಸಲ್ಲಿಸಲು ಸೂಚಿಸಿದೆ. ತಪ್ಪಿದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ನೋಟೀಸ್ ನೀಡಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button