ಎರಡು ಪ್ರತ್ಯೇಕ ರಸ್ತೆ ಅಪಘಾತ ಎರಡು ಸಾವು-ಓರ್ವನಿಗೆ ಗಾಯ

ಸುದ್ದಿಲೈವ್. ಕಾಂ/ಶಿವಮೊಗ್ಗ
ಶಿವಮೊಗ್ಗದ ಜಿಲ್ಲೆಯಲ್ಲಿ ಪ್ರತೀದಿನವೂ ಒಂದಲ್ಲಾ ಒಂದು ಅಪಘಾತ ನಡೆಯುತ್ತಲೇ ಇರುತ್ತದೆ.. ಅದರಲ್ಲೂ ಹೊಸಾ ತಂತ್ರಜ್ಞಾನದ ಹೊಸಥರದ ದುಬಾರಿಬೆಲೆಯ ಬೈಕ್ ಗಳು ಅಪಘಾತವಾಗುತ್ತಿರುವುದು ಯುವಕರಲ್ಲಿ ಜಾಗೃತಿಯ ಕೊರತೆ ಮತ್ತು ಅತೀವೇಗದ ಆತುರದ ಕ್ಷಣಗಳ ಅರಿವುಗಳು ಮೂಡಬೇಕಾಗಿದೆ.
ನಿನ್ನೆಯ ದಿನ ರಾತ್ರಿ ಶಿವಮೊಗ್ಗ ನಗರದ ಗಾಡಿಕೊಪ್ಪದ ಬಳಿ ಗಜಾನನ ಹೋಟೆಲ್ ನ ಎದುರು ಗಣಪತ್ರಿ ಎಂಬ ಇಪ್ಪತ್ತಾರು ವರ್ಷದ ಯುವಕ ರಸ್ತೆಯನ್ನು ದಾಟುತ್ತಿದ್ದಾಗ ಅತೀವೇಗವಾಗಿ ಸಾಗರದ ಕಡೆಯಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ KTM Duke ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತ ಮಾಡಿದ ಯುವಕ ತೀವ್ರವಾಗಿ ಗಾಯಗೊಂಡು ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.
ಅಪಘಾತದಿಂದ ಮೃತಪಟ್ಟ ಗಣಪತ್ರಿ ಎಂಬ ಯುವಕ ಸಾಗರ ರಸ್ತೆಯ ಹರ್ಷ ಫೆರ್ನ್ ಹೋಟೆಲ್ ಹಿಂಬಾಗದ (ಹಕ್ಕಿಪಿಕ್ಕಿ ಕ್ಯಾಂಪ್) ನ ಹಿಂಬಾಗದ ನಿವಾಸಿಯಾಗಿದ್ದಾನೆ.
ಇಂದು ಬೆಳಗ್ಗೆ ಶಿವಮೊಗ್ಗ ನಗರದ ಸೋಮಿನಕೊಪ್ಪ ರಸ್ತೆಯ ಜೆ.ಹೆಚ್.ಪಟೇಲ್ ಬಡಾವಣೆ ಹತ್ತಿರ ತಮೀಳ್ ತಾಯ್ ಸಂಘಮ್ ಎದುರಿನ ರಸ್ತೆಯಲ್ಲಿ KA-14.EQ 3775 ರಾಯಲ್ ಎನ್ಫೀಲ್ಡ್ ದ್ವಿಚಕ್ರ ವಾಹನದ ಸವಾರ ಮೊಹಮ್ಮದ್ ಫೈಜ಼್ 21 ವರ್ಷ ಮತ್ತು ಮೊಹಮ್ಮದ್ ಇಸಾಕ್ ಇಬ್ಬರೂ ರಸ್ತೆಯ ಬದಿಯಲ್ಲಿ ಗಾಡಿ ನಿಲ್ಲಿಸಿಕೊಂಡು ಮಾತಾಡುತ್ತಿದ್ದಾಗ ಹಿಂಬದಿಯಿಂದ ಅತೀವೇಗವಾಗಿ ಬಂದ ಬಜಾಜ್ ಡಿಸ್ಕವರಿ (KA-14.Y 6414) ಡಿಕ್ಕಿ ಹೊಡೆದಿದ್ದಾನೆ.
ಗುದ್ದಿದ ರಭಸಕ್ಕೆ ಬುಲೆಟ್ ಬೈಕ್ ಮೇಲೆ ಕುಳಿತಿದ್ದ ಮೊಹಮ್ಮದ್ ಫೈಜ಼್ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಿಂದೆ ಕುಳಿತಿದ್ದ ಮೊಹಮ್ಮದ್ ಇಸಾಕ್ ಗಾಯಗೊಂಡು ಆಸ್ಪತ್ರೆಯನ್ನು ಸೇರಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತ ಮೊಹಮ್ಮದ್ ಫೈಜ಼್ ವೆಲ್ಡಿಂಗ್ ಕೆಲಸವನ್ನು ಮಾಡಿಕೊಂಡಿದ್ದು ಸೋಮಿನಕೊಪ್ಪ ನಿವಾಸಿಯಾಗಿದ್ದಾನೆ.
ಈ ಎರೆಡೂ ಅಪಘಾತದಿಂದ ಮೃತಪಟ್ಟ ಇಬ್ಬರು ಯುವಕರ ದೇಹವನ್ನು ನಗರದ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಎರೆಡೂ ಅಪಘಾತ ಪ್ರಕರಣಗಳ ಬಗ್ಗೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..
ಹೋಗುವಾಗ ನೂರರಲ್ಲಿ (100) ಬರುವಾಗ ನೂರಾ ಎಂಟರಲ್ಲಿ (108)… ಎಂಬಂತಹ ಮಾತು ಪ್ರತೀದಿನವೂ ಪ್ರತಿಧ್ವನಿಸುತ್ತಿರುವಂತಿದೆ.
