ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಟನೆ ನಡೆಸಿದ್ದೇಕೆ?

ಸುದ್ದಿಲೈವ್. ಕಾಂ/ಶಿವಮೊಗ್ಗ
ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳ ವೇತನ ಸರಿಯಾದ ಸಮಯಕ್ಕೆ ಪಾವತಿಯಾಗದಿರುವ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಘಟಕ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಧರಣಿ ನಡೆಸಿ ಸಿಇಒ ವೈಶಾಲಿಯವರಿಗೆ ಮನವಿ ನೀಡಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಯಾಗಿರುವುದಿಲ್ಲ ಹಾಗೂ ಈ ಹಿಂದೆಯೂ ಕೂಡ ಪ್ರತಿ ಬಾರಿಯು 4 ರಿಂದ 5 ತಿಂಗಳು ತಡವಾಗಿ ವೇತನವನ್ನು ಪಾವತಿ ಮಾಡಲಾಗಿತ್ತು, ಇದರಿಂದ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಜೀವನ ನಿರ್ವಹಣೆ ಮಾಡಲು ತುಂಬ ಕಷ್ಟವಾಗುತ್ತಿದೆ ಎಂದು ಸಂಘ ಮನವಿಯಲ್ಲಿ ತಿಳಿಸಿದೆ.
ಈ ಬಗ್ಗೆ ಹಲವಾರು ಬಾರಿ ಸಿಇಒರವರಿಗೆ ಮನವಿಮಾಡಿಕೊಂಡಿದ್ದು, ಈ ವಿಷಯದ ಕುರಿತು ಸಿಇಒರವರು ಆಯುಕ್ತರಿಗೂ ಮನವರಿಕೆ ಮಾಡಿದಾಗ್ಯೂ ಸಹ ವೇತನ ಸರಿಯಾದ ವೇಳೆಯಲ್ಲಿ ಪಾವತಿ ಆಗಲಿಲ್ಲ. ಪ್ರತಿ ಬಾರಿಯೂ ವಿವಿದ ಕಾರಣಗಳಿಂದ ಕನಿಷ್ಠ 5 ತಿಂಗಳಿಗೊಮ್ಮೆ ವೇತನ ಪಾವತಿಯಾಗುತ್ತಿರುವ ಕಾರಣ ನಮ್ಮ ಜೀವನ ನಿರ್ವಹಣೆ ತುಂಬಾ ಶೋಚನಿಯ ಪರಿಸ್ತಿಥಿಯಲ್ಲಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡಿದ್ದಾರೆ.
ದಯಮಾಡಿ ಪ್ರತಿ ತಿಂಗಳು ವೇತನ ಪಾವತಿ ಮಾಡಲು ಶಾಶ್ವತ ಪರಿಹಾರ ಕಲ್ಪಿಸಲು ಮಾನ್ಯ ಆಯುಕ್ತರಿಗೆ ನಮ್ಮ ಪರವಾಗಿ ಇನ್ನೊಮ್ಮೆ ಮನವರಿಕೆ ಮಾಡಬೇಕೆಂದು ಪ್ರತಿಭಟನಾಕಾರರು ಸಿಇಒ ವೈಶಾಲಿಯವರನ್ನ ಒತ್ತಯಿಸಿದ್ದಾರೆ.
ಜೂನ್ 25, 2022 ರ ಅಂತ್ಯಕ್ಕೆ ಒಟ್ಟು 5 ತಿಂಗಳುಗಳ ವೇತನ ಪಾವತಿ ಬಾಕಿ ಇದ್ದು, ಪ್ರಸ್ತುತ ಶಾಲೆಗಳು ಪ್ರಾರಂಭವಾಗಿರುವುದರಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ಸಹ ಹಣವಿಲ್ಲದಂತಹ ಪರಸ್ಥಿತಿ ಎದುರಾಗಿದೆ. ಸತ್ಯಾಂಶವನ್ನು ಈ ಹಿಂದೇ ಹಲವು ಬಾರಿ ವೇತನ ಪಾವತಿಸುವಂತೆ ಮನವಿ ಸಲ್ಲಿಸಿದ್ದರೂ ಸಹ ವೇತನ ಪಾವತಿಯನ್ನು ಸಕಾಲದಲ್ಲಿ ಮಾಡಿಲ್ಲ ಎಂದು ತಿಳಿಸಿದರು.
