ಕಪ್ಪು ಬೈಕ್ ನಲ್ಲಿ ಬಂದ ಅಪರಿಚಿತರಿಂದ 5 ಲಕ್ಷ ರೂ. ಲೂಟಿ

ಸುದ್ದಿಲೈವ್. ಕಾಂ/ಸೊರಬ
ರೈತರಿಗೆ ಬಟವಾಡೆ ಮಾಡಲು ಬ್ಯಾಂಕಿನಿಂದ ಹಣ ತರುವ ವೇಳೆ ಸೊರಬದ ಕೊಡಕಣಿ 02 ನೇ ಬಸ್ ಸ್ಟ್ಯಾಂಡ್ ಹತ್ತಿರ ಹಾಡುಹಗಲೇ ದರೋಡೆ ನಡೆದಿದೆ. ಯುವಕನನ್ನ ತಳ್ಳಿ ಬೈಕ್ ನಲ್ಲಿದ್ದ 5 ಲಕ್ಷ ರೂ.ಗಳನ್ನ ಅಪರಿಚಿತರು ಲಪ್ಟಾಯಿಸಿದ್ದಾರೆ.
ತಾಲೂಕಿನ ಕಾಸ್ಪಾಡಿಕೊಪ್ಪದ ತಮ್ಮಣ್ಣಪ್ಪ ಎಂಬುವರು ವ್ಯವಸಾಯ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಮೆಕ್ಕೆಜೋಳದ ಬಾಬ್ತು 1,00000/ -ರೂ(ಒಂದು ಲಕ್ಷ) ಹಾಗೂ ಗ್ರಾಮದ ರೈತರಿಗೆ ಬಟಾವಡೆ ಮಾಡಲು 4,00000/-(ನಾಲ್ಕು ಲಕ್ಷ) ರೂಗಳು ಒಟ್ಟು 5,00000/ರೂಳನ್ನು ಮನ್ಮನೆಯ ರೇವಣಪ್ಪ ರವರು ತಮ್ಮಣ್ಣಪ್ಪರಿಗೆ ನೀಡಿದ್ದು, ಅದರಂತೆ ಸೊರಬ ಕೆನರಾ ಬ್ಯಾಂಕಿನ ಖಾತೆಗೆ ಹಣ ಹಾಕಿರುತ್ತಾರೆ.
ತಮ್ಮಣ್ಣಪ್ಪ ಮತ್ತು ಅವರ ಮಗ ಮನೋಜ ಇಬ್ಬರು ಮೊನ್ನೆ ಸೊರಬ ಕೆನರಾ ಬ್ಯಾಂಕಿಗೆ ಬಂದು 5,00000/- (ಐದು ಲಕ್ಷ) ರೂಗಳನ್ನು ಡ್ರಾ ಮಾಡಿಕೊಂಡು ಬೈಕ್ ಸಂಖ್ಯೆ ಕೆಎ 15 ಎಸ್ 4233 ನೊಂದಣಿ ಸಂಖ್ಯೆಯ ಬೈಕಿನ ಸೈಡ್ ಬ್ಯಾಗಿನಲ್ಲಿ ಹಣವನ್ನು ಇಟ್ಟುಕೊಂಡು ತಮ್ಮ ಗ್ರಾಮದ ಕಡೆಗೆ ಹೊರಟಿದ್ದಾರೆ.
ಮದ್ಯಾಹ್ನ ಸುಮಾರು 1-00 ಗಂಟೆಗೆ ಕೊಡಕಣಿ 02 ನೇ ಬಸ್ ಸ್ಟ್ಯಾಂಡ್ ಹತ್ತಿರ ಬೈಕ್ ನ್ನು ನಿಲ್ಲಿಸಿ ಪರಿಚಯವಿರುವ ಗಂಗಮ್ಮರವರ ಮನೆಗೆ ಹೋಗಿರುತ್ತಾರೆ. ಬೈಕಿನ ಬಳಿ ಮಗ ಮನೋಜ್ ನಿಂತುಕೊಂಡಾಗ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಬೈಕಿನಲ್ಲಿ ಬಂದ ಅಪರಿಚಿರು ಮನೋಜನನ್ನ ನೂಕಿ ಬೈಕಿನ ಬ್ಯಾಗಿನಲ್ಲಿದ್ದ 5,00000/ ರೂಗಳನ್ನು ಹಣವನ್ನು ಕಿತ್ತುಕೊಂಡು ಶಿರಾಳಕೊಪ್ಪ, ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗಿದ್ದಾರೆ.
ಇಬ್ಬರು ಅಪರಿಚಿತರು 25 ರಿಂದ 30 ವಯಸ್ಸಿನ ವ್ಯಕ್ತಿಗಳಾಗಿದ್ದು, ಕೂಡಲೇ ಅವರನ್ನ ಮನೋಜ್ ಹಿಂಬಾಲಿಸಿಕೊಂಡು ಹೋದರು ಪತ್ತೆಯಾಗಿರುವುದಿಲ್ಲ. ಪ್ರಕರಣ ಸೊರಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
