ಪತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಗ್ರಾಮಪಂಚಾಯತಿ ಮಹಿಳೆ

ಸುದ್ದಿಲೈವ್. ಕಾಂ/ತೀರ್ಥಹಳ್ಳಿ
ತೀರ್ಥಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕೌಟುಂಬಿಕ ಕಲಹದ ಪತಿಯ ಕಿರುಕುಳದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ತೀರ್ಥಹಳ್ಳಿ ತಾಲೂಕು ಉಡುಕೆರೆ ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಾ(46) ಎಂಬುವರು ತನ್ನ ಪತಿಯ ಅನುಮಾನ ಮತ್ತು ದೈಹಿಕ ಹಿಂಸೆ ಹಿನ್ಬಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
27 ವರ್ಷದ ಹಿಂದೆ ರಾಮಚಂದ್ರ ಎಂಬುವರೊಂದಿಗೆ ವಿವಾಹವಾಗಿದ್ದು 3 ವರ್ಷಗಳ ನಂತರ ಪತ್ನಿ ಪ್ರೇಮಾರವನ್ನ ಬೈಯಲು ಆರಂಭಿಸಿದ್ದಾರೆ ಎಂದು ಪ್ರೇಮಾ ದೂರಿನಲ್ಲಿ ಆರೋಪಿಸಿದ್ದಾರೆ.
7 ವರ್ಷಗಳ ಹಿಂದೆ ಪ್ರೇಮಾರವರು ಗ್ರಾಮ ಪಂಚಾಯಿತಿಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಗ್ರಾಮ ಪಂಚಾಯಿತಿ ಸದಸ್ಯೆ ಆಗಿರುವುದೇ ವ್ಯಭಿಚಾರ ಮಾಡಲಿಕ್ಕೆ ಎಂದು ಬೈಯ್ಯುತ್ತಾರೆ, ಇತ್ತೀಚೆಗೆ ನೀಲಗಿರಿ ಪೋಲ್ಸ್ ನ್ನ ಮಾರಾಟ ಮಾಡಿದ್ದು, 1,10,000 ರೂ. ಹಣವನ್ನ ಕುಟುಂಬಕ್ಕೆ ತಿಳಿಸಿರಲಿಲ್ಲ. ಹಣವೆಲ್ಲಿ ಎಂದು ಕೇಳಿದ್ದಕ್ಕೂ ಬೈದಾಡಿ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.
ಪಕ್ಕದ ಮನೆಯರೊಂದಿಗೆ ಮಾತನಾಡುತ್ತಿದ್ದ ವೇಳೆ ಕತ್ತಿ ಹಿಡಿದುಕೊಂಡು ಬಂದ ರಾಮಚಂದ್ರ ನನ್ನ ಮೇಲೆ ದಾಳಿ ನಡೆಸಿದ್ದಾನೆ. ಈತನ ಕತ್ತಿಯ ದಾಳಿಯಿಂದ ಪಾರಾಗಿದ್ದು ಮಕ್ಕಳಿಬ್ಬರು ಪತಿಯನ್ನ ಸಮಾಧಾನ ಪಡಿಸಿದ್ದಾರೆ. ಇತ್ತೀಚೆಗೆ ಮನೆಯಲ್ಲಿದ್ದಾಗ ಪತಿಯ ದೈಹಿಕ ಹಾಗೂ ಮಾನಸಿಕ ಹಿಂಸೆ ತಾಳಲಾರದೆ ಕಳೆನಾಶಕವನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅವರನ್ನ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಿ ನಂತರ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯ ವಿರುದ್ಧ ಪ್ರೇಮಾ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
