ಪತ್ನಿಯ ಸಹೋದರನ ಮನೆಗೆ ನುಗ್ಗಿ ಬೈಕಿಗೆ ಬೆಂಕಿಯಿಟ್ಟ ಭಾವ!

ಸುದ್ದಿಲೈವ್. ಕಾಂ/ಶಿವಮೊಗ್ಗ
ತನ್ನ ಮನೆಗೆ ಪತ್ನಿಯ ಸಹೋದರನೇ ಪೊಲೀಸರನ್ನ ಕಳುಹಿಸಿದ್ದಾನೆ ಎಂದು ಆರೋಪಿಸಿ ರಚ್ಚೆಗೆ ಬಿದ್ದ ಪತಿರಾಯನೊಬ್ಬ ಪತ್ನಿ ಸಹೋದರನ ಮನೆಗೆ ನುಗ್ಗಿ ಆತನ ಬೈಕ್ ಗೆ ಬೆಂಕಿ ಇಟ್ಟ ಘಟನೆ ಇತ್ತೀಚೆಗೆ ನಡೆದಿದೆ.
ವಿದ್ಯಾನಗರದ ನಿವಾಸಿ ಮಹೇಂದ್ರ ಭೋವಿಯವರು ತನ್ನ ತಂಗಿಯನ್ನ ಭದ್ರಾವತಿಯ ಅಗರದಹಳ್ಳಿಯ ಸಿದ್ದರ ಕಾಲೋನಿ ನಿವಾಸಿ ಹನುಂತಪ್ಪನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಆದರೆ ಇತ್ತೀಚೆಗೆ ಹನುಮಂತಪ್ಪ ಪತ್ನಿ ಮತ್ತು ಮಕ್ಕಳಿಗೆ ದಿನ ಕಿರಿಕಿರಿ ಮಾಡಿ ದೈಹಿಕವಾಗಿ ಹಿಂಸಿದ್ದಾರೆ.
ಈ ಹಿನ್ನಲೆಯಲ್ಲಿ ಮಹೇಂದ್ರ ಭೋವಿ 112 ಗೆ ಕರೆ ಮಾಡಿ ದೂರು ನೀಡಿದ್ದಾರೆ. ಪೊಲೀಸರು ಹನುಮಂತಪ್ಪರ ಮನೆಗೆ ತೆರಳಿ ಹೇಳಿಕೆ ಪಡೆದುಕೊಂಡು ಬಂದಿರುತ್ತಾರೆ. ಇದಕ್ಕೆ ರೊಚ್ಚಿಗೆದ್ದ ಹನುಮಂತಪ್ಪ ಪತ್ನಿಯ ಸಹೋದರನು ವಾಸವಿರುವ ವಿದ್ಯಾನಗರದ ಭೋವಿ ಕಾಲೋನಿಯ ಮನೆಗೆ ನುಗ್ಗಿ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಇಟ್ಟಿದ್ದಾನೆ.
ಬೈಕ್ ಹೊತ್ತಿ ಉರಿದಿದೆ. ಮನೆಗೆ ಪೊಲೀಸರನ್ನ ಕಳುಹಿಸ್ತ್ಯಾ? ನಿನಗೂ ಇದೇ ಗತಿಯಾಗಲಿದೆ ಎಂದು ಬೆದರಿಸಿದ್ದಾನೆ. ಮೂರು ನಾಲ್ಕು ಜನರೊಂದಿಗೆ ಬಂದಿದ್ದ ಹನುಮಂತಪ್ಪ ಧಮ್ಕಿ ಹಾಕಿ ಕಾರಿನಲ್ಲಿ ತೆರಳಿರುವುದಾಗಿ ಮಹೇಂದ್ರ ಭೋವಿ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
