ಕ್ರೈಂ

ಹೋಲ್ ಸೇಲ್ ಬಟ್ಟೆ ಅಂಗಡಿಯಲ್ಲಿ 2,14,254 ರೂ. ಹಣ ಕಳುವು

ಸುದ್ದಿಲೈವ್. ಕಾಂ/ಶಿವಮೊಗ್ಗ

ಗಾಂಧಿ ಬಜಾರ್ ನ ವಿಜಯ ಕಾಂಪ್ಲೆಕ್ಸ್ ನಲ್ಲಿರುವ ಶಿವಗಂಗಾ ಬಟ್ಟೆ ಅಂಗಡಿಯಲ್ಲಿ ಕಳ್ಳತನವಾಗಿದ್ದು, ವ್ಯಾಪಾರ ಮಾಡಿದ್ದ 2 ಲಕ್ಷದ 14 ಸಾವಿರ ರೂ. ಹಣ ಕಳವಾಗಿದೆ.

ಅಂಗಡಿಯ ಹಿಂಬದಿಯಲ್ಲಿರುವ ಅಲೂಮಿನಿಯಂ ಸೈಡರ್ ಡೋರ್ ನ್ನು ತೆರೆದು ಅಂಗಡಿಯ ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಲಾಕ್ ಮಾಡಿದ ಕಾಶ್ ಡ್ರಾವನ್ನು ಯಾವುದೋ ಆಯುಧದಿಂದ ಲಾಕನ್ನು ಮುರಿದು ಡ್ರಾದಲ್ಲಿದ್ದ 2,14,254 ರೂ. ಕಳುವಾಗಿದೆ ಎಂದು ವಿನೋದ್ ಸಿಂಗ್ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.‌

ವ್ಯಾಪಾರ ಮಾಡಿದ ಹಣವನ್ನು 02 ದಿನಕ್ಕೊಮ್ಮೆ ಬ್ಯಾಂಕಿಗೆ ಕಟ್ಟಲು ಅಂಗಡಿಯ ವ್ಯಾಪಾರದ ಹಣವನ್ನ ಡ್ರಾ ದಲ್ಲಿಟ್ಟಿದ್ದ 2,14,254/- ರೂ ನಗದು ಹಣವನ್ನು ಕಳವುಮಾಡಲಾಗಿದೆ ಎಂದು ವಿನೋದ್ ಸಿಂಗ್ ದೂರಿನಲ್ಲಿ ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button