ತಪಾಸಣೆ ವೇಳೆ ಬೆಳಕಿಗೆ ಬಂತು ಕಳ್ಳತನವಾಗಿದ್ದ ವಾಹನಗಳು

ಸುದ್ದಿಲೈವ್. ಕಾಂ/ಶಿವಮೊಗ್ಗ
ವಾಹನ ತಪಾಸಣೆ ವೇಳೆ ಕಳ್ಳತನ ವಾಗಿರುವ ವಾಹನಗಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಿಳಘಟ್ಟದ ಶಾಲೆಯ ಬಳಿ ದೊಡ್ಡಪೇಟೆ ಪೊಲೀಸರು ತಪಾಸಣೆ ನಡೆಸಿದ ವೇಳೆ ಎರಡು ಕಳವು ಮಾಡಿದ ಟಿವಿಎಸ್ ಎಕ್ಸಲ್ ದ್ವಿಚಕ್ರ ವಾಹನ ಪತ್ತೆಯಾಗಿದೆ.
ಮಿಳಘಟ್ಟದ ಶಾಲೆಯ ಬಳಿ ದೊಡ್ಡಪೇಟೆ ಪೊಲೀಸ್ ಠಾಣೆಯ ಎಎಸ್ಐ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ತಪಾಸಣೆ ನಡೆಸುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಟಿವಿಎಸ್ ಚಲಾಯಿಸಿಕೊಂಡು ಬಂದಿದ್ದಾರೆ. ಪೊಲೀಸರನ್ನ ಕಂಡು ಪರಾರಿಯಾಗಲು ಯತ್ನಿಸಿದ್ದಾರೆ.
ಒಬ್ಬ ವಾಹನ ಬಿಟ್ಟು ಪರಾರಿಯಾದರೆ ಇನ್ನೊಬ್ಬ ರೆಡ್ ಹ್ಯಾಂಡ್ ನಲ್ಲಿ ಸಿಕ್ಕಿಕೊಂಡಿದ್ದಾನೆ. ಇಬ್ಬರ ಹೆಸರು ಕೇಳಿದಾಗ ಟಿಪ್ಪುನಗರದ 7 ನೇ ತಿರುವಿನ ನಿವಾಸಿ ಮೊಹ್ಮದ್ ಸಲ್ಮಾಲ್ ಎಂದು ತಿಳಿದುಬಂದಿದೆ. ಪರಾರಿಯಾಗಲು ಯತ್ನಿಸಿದ್ದೇಕೆ ಎಂದು ಕೇಳಿದಾಗ ಎರಡು ವಾಹನಗಳನ್ನ ಕದ್ದು ಮಾರಾಟ ಮಾಡಲು ಹೋಗುತ್ತಿರುವುದಾಗಿ ತಿಳಿಸಿದ್ದಾನೆ.
ಪಾರಾರಿಯಾದ ವ್ಯಕ್ತಿಯನ್ನ ಹೊಸಮನೆ ಚರ್ಚ್ ನಿವಾಸಿ ರಾಘವೇಂದ್ರ ಯಾನೆ ರಾಘು ಎಂದು ಸಲ್ಮಾನ್ ಬಾಯಿಬಿಟ್ಟಿದ್ದಾನೆ. ಎರಡು ವಾಹನವನ್ನ ವಶಕ್ಕೆ ಪಡೆದ ಪೊಲೀಸರು ಸಲ್ಮಾನ್ ನನ್ನ ಬಂಧಿಸಿದ್ದಾರೆ. ಎರಡೂ ವಾಹನಗಳನ್ನ ಗಾಂಧಿನಗರ ಮತ್ತು ನವುಲೆ ಬಳಿ ಕಳವು ಮಾಡಿರುವುದಾಗಿ ಸಲ್ಮಾನ್ ಬಾಯಿ ಬಿಟ್ಟಿದ್ದಾನೆ.
