ಕ್ರೈಂ

ಕ್ರಿಕೇಟ್ ಆಡುವ ವೇಳೆ ನಗರಸಭೆಯ ವಾಟರ್ ಸಪ್ಲಯರ್ ಹೃದಯಾಘಾತದಿಂದ ಸಾವು

ಸುದ್ದಿಲೈವ್. ಕಾಂ/ಭದ್ರಾವತಿ

ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಭದ್ರಾವತಿ ನಗರಸಭೆ ಸಿಬ್ಬಂದಿಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿರುವ ವಿಐಎಸ್ ಎಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಕ್ರಿಕೆಟ್ ಮ್ಯಾಚ್ ವೇಳೆ ಈ ಘಟನೆ ನಡೆದಿದೆ.

ದಿನೇಶ್ ರಾವ್ (38) ಮೃತಪಟ್ಟ ವ್ಯಕ್ತಿಯಾಗಿದ್ದು, ಭದ್ರಾವತಿ ನಗರಸಭೆ ವತಿಯಿಂದ ಕಾರ್ಮಿಕರು ಹಾಗು ಸಿಬ್ಬಂದಿಯವರಿಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೇಟ್ ಆಡುವ ವೇಳೆ ದಿನೇಶ್ ಕುಸಿದು ಬಿದ್ದಿದ್ದಾರೆ.

ಸ್ಥಳದಲ್ಲಿಯೇ ಇದ್ದ ಆರೋಗ್ಯ ಸಿಬ್ಬಂದಿಯಿಂದ ದಿನೇಶ್ ತಪಾಸಣೆ ನಡೆದಿದೆ. ಕುಸಿದು ಬಿದ್ದ ತಕ್ಷಣವೇ ದಿನೇಶ್ ಮೃತಪಟ್ಟ ಬಗ್ಗೆ  ಆರೋಗ್ಯ ಇಲಾಖೆ ಸಿಬ್ಬಂದಿಯವರು ಸ್ಪಷ್ಟಪಡಿಸಿದ್ದಾರೆ.

ನಂತರ ಮೃತದೇಹವನ್ನು ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ವಿಧಿಯ ಆಟ ಬಲ್ಲವರಿಲ್ಲದಂತಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button