ರಾಜಕೀಯ
ಮೋದಿ ತೊಲಗು ಎಂಬ ಅಭಿಯಾನಕ್ಕೆ ಮಾಜಿ ಸಚಿವರ ಲೇವಡಿ

ಸುದ್ದಿಲೈವ್. ಕಾಂ/ಶಿವಮೊಗ್ಗ
ರಾಜ್ಯದಲ್ಲಿ ಆರಂಭಗೊಂಡಿರುವ ತೊಲಗು ಮೋದಿ ಅಭಿಯಾನಕ್ಕೆ ಮಾಜಿ ಸಚಿವ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ. ತೊಲಗು ಎಂದು ಕೂಗಲು ಅವರ ಬಾಯಲ್ಲಿ ನಾಲಿಗೆಯೂ ಇಲ್ಲ.ತೊಲಗು ಕೂಗಲು ಅವರಿಗೆ ಶಕ್ತಿಯು ಇಲ್ಲ. ಮೈಯಲ್ಲಿ ತ್ರಾಣ ಇಲ್ಲ, ಮೈಯಲ್ಲಿ ಶಕ್ತಿಯು ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ತೊಲಗು ಎಂದು ಹೇಳಲು ನಾಲಿಗೆ ಇಲ್ಲ, ಶಕ್ತಿ ಇಲ್ಲ, ಮೈಯಲ್ಲಿ ರಕ್ತನೂ ಇಲ್ಲ. ಮೋದಿ ಬೆಳೆಯಲಿ ಎಂದು ಇಡೀ ದೇಶದ ಜನ ಹೇಳುತ್ತಿದ್ದಾರೆ.ನಾವು ಎಲ್ಲಿ ಇಲ್ಲವೋ ಅಲ್ಲಿಗೆ ಜನರು ಮೋದಿಯವರನ್ನ ಆಹ್ವಾನ ನೀಡುತ್ತಿದ್ದಾರೆ ಎಂದು ಅಭಿಯಾನಕ್ಕೆ ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದರು.
