ಸ್ಥಳೀಯ ಸುದ್ದಿಗಳು

ಇಂದು ತಂತ್ರಗಾರಿಕೆ ಬಳಸಿಕೊಂಡು ಮೂಲೆ ಮೂಲೆಗೂ ಪತ್ರಿಕೋದ್ಯಮ ಬೆಳೆದಿದೆ-ಬಿವೈಆರ್

ಸುದ್ದಿಲೈವ್. ಕಾಂ/ಶಿವಮೊಗ್ಗ

ಪ್ರಪಂಚದ ಯಾವುದೇ ವಿದ್ಯಾಮಾನಗಳನ್ನ‌ಹಳ್ಳಿಗಳಿಗೆ ತಲುಪಿಸುವ ಜವಬ್ದಾರಿಯನ್ನ ಪತ್ರಿಕೋದ್ಯಮ ನಿರ್ವಹಿಸುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಅವರು ಶಿವಮೊಗ್ಗದ ಸರ್ಕಾರಿ ನೌಕರರಸಂಘ ದ ಭವನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಮಾಡಿ ಮಾತನಾಡಿದರು.

180 ವರ್ಷದ ಇತಿಹಾಸ ಇರುವ ಪತ್ರಿಕೋದ್ಯಮ ಕ್ಷೇತ್ರ ಸರ್ಕಾರವನ್ನ ಎಚ್ಚರಿಸುತ್ತಾ, ಸಾರ್ವಜನಿಕರನ್ನ ಜಾಗೃತಿಗೊಳಿಸುತ್ತಾ ಬೆಳೆದುಬಂದಿದೆ.

ಇಂದು ತಂತ್ರಗಾರಿಕೆಯನ್ನ ಬಳಸಿಕೊಂಡು ಪತ್ರಿಕೋದ್ಯಮ ಬೆಳೆದಿದೆ. ಇಂದು ಡಿಜಿಟಲ್ ಮಾಧ್ಯಮದಿಂದ ದೇಶದ ಮೂಲೆ ಮೂಲೆಗೆ ಸುದ್ದಿಗಳು ತಲುಉತ್ತಿವೆ. ಕಾರ್ಯಕ್ರಮಕ್ಕೆ ಪ್ರತಿಜ್ಞಾವಿಧಿ ಸೀಮಿತಗೊಳ್ಳದೆ ವರ್ಷವಿಡೀ ಚಟುವಟಿಕೆಯಿಂದ ಕೂಡಲಿ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೋದ್ಯಮ ಪ್ರಮುಖ ಪಾತ್ರ ವಹಿಸಿತ್ತು. ಇಂದು ಸಹ ಜನರ ಪ್ರತಿಧ್ವನಿಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು‌.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button